×
Ad

ಭಾರತ ವಿರುದ್ಧದ ಸರಣಿಯಿಂದ ಕೇನ್ ವಿಲಿಯಮ್ಸನ್ ಔಟ್

Update: 2025-12-24 07:52 IST

ಕೇನ್ ವಿಲಿಯಮ್ಸನ್ (File Photo: PTI)

ಹೊಸದಿಲ್ಲಿ: ಮುಂದಿನ ವರ್ಷ ನಡೆಯುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಪಂದ್ಯಾವಳಿಗೆ ಸಿದ್ಧತೆಯಾಗಿ ಸೀಮಿತ ಓವರ್ ಗಳ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಝಿಲೆಂಡ್ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಜನವರಿ 11ರಿಂದ ಆರಂಭವಾಗುವ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳು ಇರುತ್ತವೆ.

ವಿಶ್ವಕಪ್ ಪಂದ್ಯಗಳು ಫೆಬ್ರವರಿ 7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದ್ದು, ನ್ಯೂಝಿಲೆಂಡ್ ತಂಡದ ವ್ಯವಸ್ಥಾಪಕರು ಈ ಪ್ರವಾಸವನ್ನು ಪ್ರಮುಖ ಕಾರ್ಯತಂತ್ರದ ಸರಣಿಯಾಗಿ ಪರಿಗಣಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಐದು ಪಂದ್ಯಗಳ ಟಿ20 ಸರಣಿ ನ್ಯೂಝಿಲೆಂಡ್‍ಗೆ ಮಹತ್ವದ್ದಾಗಿದೆ.

ಗುಣಮಟ್ಟದ ಸ್ಪಿನ್ ಹಾಗೂ ನಿಧಾನಗತಿಯ ಪಿಚ್‍ಗಳಿಗೆ ಹೊಂದಿಕೊಳ್ಳಲು ನ್ಯೂಝಿಲೆಂಡ್ ಆಟಗಾರರಿಗೆ ಇದು ನೆರವಾಗಲಿದೆ. ಜಾಗತಿಕ ಟೂರ್ನಿಗೆ ಈ ಅನುಭವ ಮಹತ್ವದ್ದಾಗಲಿದೆ ಎಂಬ ನಂಬಿಕೆ ತಂಡದ್ದಾಗಿದೆ.

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಆಗಮಿಸಿರುವ ಮಿಚೆಲ್ ಸ್ಯಾಂಟರ್ ಟಿ20 ತಂಡದ ನಾಯಕರಾಗಿರತ್ತಾರೆ. ಏಕದಿನ ಪಂದ್ಯಗಳಿಗೆ ಮೈಕೆಲ್ ಬ್ರೇಸ್‍ವೆಸ್ ತಂಡದ ನೇತೃತ್ವ ವಹಿಸಲಿದ್ದಾರೆ. ಹಿರಿಯ ಆಟಗಾರರನ್ನು ಟೂರ್ನಿಗೆ ಕರೆಸಿಕೊಳ್ಳಲಾಗಿದ್ದು, ಉತ್ತಮ ಸಾಧನೆ ತೋರುತ್ತಿರುವ ಹೊಸಮುಖಗಳೂ ತಂಡದಲ್ಲಿವೆ.

ದೇಶಿ ಕ್ರಿಕೆಟ್ ಹಾಗೂ ಎ ತಂಡದ ಕ್ರಿಕೆಟ್‍ನಲ್ಲಿ ಉತ್ತಮ ಸಾಧನೆ ತೋರಿದ ಜೇಡನ್ ಲೆನಾಕ್ಸ್, ಕ್ರಿಸ್ಟಿಯನ್ ಕ್ಲರ್ಕ್, ಜಾಕೋಬ್ಸ್ ಹಾಗೂ ಟಿಮ್ ರಾಬಿನ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಮೈಕೆಲ್ ರೇ ಕೂಡಾ ತಂಡದಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಕೈಲ್ ಜೆಮಿಸನ್ ಏಕದಿನ ಹಾಗೂ ಟಿ20 ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಮಾರ್ಕ್ ಚಾಪ್‍ಮನ್ ಹಾಗೂ ಮ್ಯಾಟ್ ಹೆನ್ರಿ ಕೂಡಾ ಟಿ20 ತಂಡದಲ್ಲಿದ್ದಾರೆ. ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಜಾಕೋಬ್ ಡುಫೆ, ವಿಲ್ ಓ ರೂರ್ಕೆ ಮತ್ತು ಬ್ಲೇರ್ ಟಿಕ್ನರ್ ಅವರು ಗಾಯದ ಸಮಸ್ಯೆ ಅಥವಾ ಒತ್ತಡ ನಿರ್ವಹಣೆ ಕಾರಣದಿಂದ ಟೂರ್ನಿ ತಪ್ಪಿಸಿಕೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News