×
Ad

ನೆದರ್‌ ಲ್ಯಾಂಡ್‌ ಗೆ 323 ರನ್‌ ಗುರಿ ನೀಡಿದ ನ್ಯೂಝಿಲ್ಯಾಂಡ್‌

Update: 2023-10-09 17:54 IST

PHOTO : cricketworldcup.com

ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 6 ನೇ ಪಂದ್ಯದಲ್ಲಿ ನೆದರ್ ಲ್ಯಾಂಡ್ ವಿರುದ್ಧ ನ್ಯೂಝಿಲ್ಯಾಂಡ್ 50 ಓವರ್‌ ಗಳಲ್ಲಿ 7 ವಿಕೆಟ್‌ ಗೆ 322 ರನ್‌ ಗಳಿಸಿತು.

ಟಾಸ್ ಗೆದ್ದ ನೆದರ್ ಲ್ಯಾಂಡ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ನ್ಯೂಝಿಲ್ಯಾಂಡ್ ತಂಡ ಉತ್ತಮ ಆರಂಭ ಪಡೆಯಿತು.ಆರಂಭಿಕ ಆಟಗಾರರಾದ ಡೆವೋನ್ ಕಾನ್ವೆ ಹಾಗೂ ವಿಲ್ ಯಂಗ್ 64 ರನ್ ಗಳ ಜೊತೆಯಾಟ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಡೆವೋನ್ ಕಾನ್ವೆ 12.1 ಓವರ್ ನ ವಾನ್‌ ಡರ್ ಮರ್ವೆ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿದಾಗ ತಂಡ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ರಚಿನ್ ರವೀಂದ್ರ( 51)ಹಾಗೂ ವಿಲ್ ಯಂಗ್ (70 ) ಇಬ್ಬರು ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರು.

48 ರನ್ ಗಳಿಸಿರುವಾಗ ವಿಕೆಟ್ ಕಳೆದುಕೊಂಡ ಡರಲ್ ಮಿಚೆಲ್ ಅರ್ಧಶತಕ ವಂಚಿತರಾದರು. ಕಾಯಂ ನಾಯಕ ಅಲಭ್ಯ ತೆಯ ನಡುವೆ ನಾಯಕನ ಜವಾಬ್ದಾರಿ ನಿರ್ವಹಿಸಿದ ಟಾಮ್ ಲಾಥಮ್ ಅಮೋಘ 53 ಅರ್ಧಶಕ ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು. ನೆದರ್ ಲ್ಯಾಂಡ್ ಪರ ವಾನ್ ಡರ್ ಮರ್ವೆ , ಪೌಲ್ ವಾನ್ ಮೀಕೆರನ್ ಹಾಗೂ ಆರ್ಯನ್ ದತ್ ತಲಾ 2 ವಿಕೆಟ್ ಪಡೆದರೆ, ಬಾಸ್ ಡೇ ಲೀಡೆ 1 ವಿಕೆಟ್ ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News