×
Ad

ನ್ಯೂಝಿಲ್ಯಾಂಡ್ ತಂಡದಲ್ಲಿ ಭಾರತೀಯ ಆಟಗಾರ ರಚಿನ್ ರವೀಂದ್ರ!

Update: 2023-10-05 19:06 IST

ರಚಿನ್ ರವೀಂದ್ರ | Photo: @ICC

ಅಹ್ಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ನ್ಯೂಝಿಲಾಂಡ್ ಪರ ಆಡುತ್ತಿರುವ ರಚಿನ್ ರವೀಂದ್ರ ಭಾರತ ಮೂಲದವರು. 90 ರ ದಶಕದಲ್ಲಿ ರಚಿನ್ ತಂದೆ ರವಿ, ಬೆಂಗಳೂರಿನಿಂದ ನ್ಯೂಝಿಲಾಂಡ್ ನಲ್ಲಿ ನೆಲೆಸಿದ್ದಾರೆ.

ಈಗ ನ್ಯೂಝಿಲಾಂಡ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ರಚಿನ್, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ ನ್ಯೂಝಿಲಾಂಡ್ ಗೆ ಆಸರೆಯಾಗಿದ್ದಾರೆ. 36 ಎಸೆತ ಎದುರಿಸಿ 7 ಬೌಂಡರಿ, 2 ಸಿಕ್ಸರ್ ನೊಂದಿಗೆ 53 ರನ್ ಗಳಿಸಿರುವ ಅರ್ಧ ಶತಕ ದಾಖಲಿಸಿರುವ ಅವರ ಸ್ಟ್ರೈಕ್ ರೇಟ್ 147.22 ಇದೆ. ಇಂಗ್ಲೆಂಡ್ ನೀಡಿರುವ 283 ರನ್ ಗಳ ಗುರಿ ಬೆನ್ನಟ್ಟಿರುವ ನ್ಯೂಝಿಲಾಂಡ್ ಈಗ ಒಂದು ವಿಕೆಟ್ ಕಳೆದುಕೊಂಡು 12 ಓವರ್ಗಳಲ್ಲಿ 99 ರನ್ ಗಳಿಸಿದೆ. 8.25 ರನ್ ರೇಟ್ ಕಾಯ್ದುಕೊಂಡಿದೆ. ಡೇವನ್‌ ಕಾನ್ವೆ 45 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News