ಭಾರತೀಯ ಗ್ರಾಂಡ್ ಮಾಸ್ವರ್ ಗಳಾದ ಪ್ರಜ್ಞಾನಂದ, ಗುಕೇಶ್ ಗೆ ಹಿನ್ನಡೆ
Photo : x.com/GrandChessTour
ಬುಕಾರೆಸ್ಟ್ (ರೊಮೇನಿಯ): ಎರಡನೇ ವಿಶ್ವ ರ‍್ಯಾಂಕಿಂಗ್ ನ ಫೆಬಿಯಾನೊ ಕರುವಾನ ಶನಿವಾರ ತನ್ನ ಸೂಪರ್ಬೆಟ್ ಕ್ಲಾಸಿಕ್ ಚೆಸ್ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ. ಅವರು ರೋಮಾಂಚಕ ಟೈಬ್ರೇಕರ್ನಲ್ಲಿ ಮೂರು ರ‍್ಯಾಪಿಡ್ ಗೇಮ್ ಗಳನ್ನು ಗೆದ್ದಿದ್ದಾರೆ.
ಕ್ಲಾಸಿಕಲ್ ಮಾದರಿಯ ಸ್ಪರ್ಧೆಯಲ್ಲಿ, ಕರುವಾನ ಹಾಲಂಡ್ನ ಅನೀಶ್ ಗಿರಿ ವಿರುದ್ಧ ಸೋಲನುಭವಿಸಿದರು. ಅದು ಭಾರತೀಯ ಗ್ರಾಂಡ್ ಮಾಸ್ಟರ್ಗಳಾದ ಡಿ. ಗುಕೇಶ್ ಮತ್ತು ಆರ್. ಪ್ರಜ್ಞಾನಂದ ಹಾಗೂ ಫ್ರಾನ್ಸ್ನ ಅಲಿರೆಝ ಫಿರೋಝ ಅವರಿಗೂ ಪ್ರಶಸ್ತಿ ಗೆಲ್ಲುವ ಸಮಾನ ಅವಕಾಶಗಳನ್ನು ಒದಗಿಸಿತು. ಅವರೆಲ್ಲರೂ ಕ್ಲಾಸಿಕಲ್ ವಿಭಾಗದ ಸ್ಪರ್ಧೆಯಲ್ಲಿ ಸಮಬಲರಾಗಿದ್ದರು.
ಹಾಗಾಗಿ, ವಿಜೇತನನ್ನು ನಿರ್ಧರಿಸಲು ಟೈಬ್ರೇಕರ್ ಅನಿವಾರ್ಯವಾಯಿತು.
ಟೈಬ್ರೇಕರ್ನಲ್ಲಿ ಕರುವಾನ ಎಲ್ಲಾ ಮೂವರು ಎದುರಾಳಿಗಳನ್ನು– ಗುಕೇಶ್, ಪ್ರಜ್ಞಾನಂದ ಮತ್ತು ಅಲಿರೆಝ- ಸೋಲಿಸಿ 68,500 ಡಾಲರ್ (ಸುಮಾರು 57 ಲಕ್ಷ ರೂಪಾಯಿ) ಮೊತ್ತದ ನಗದು ಬಹುಮಾನವನ್ನು ಗೆದ್ದರು.