×
Ad

ಕುಸ್ತಿ| ಅಂತಿಮ್ ಪಾಂಘಾಲ್ ಹೀನಾಯ ಸೋಲು

Update: 2024-08-07 22:51 IST

ಅಂತಿಮ್ ಪಾಂಘಾಲ್ X/@sportwalkmedia

ಪ್ಯಾರಿಸ್ : ಕುಸ್ತಿಯಲ್ಲಿ ಭಾರತದ ಪದಕದ ಭರವಸೆಯಾಗಿದ್ದ ಅಂತಿಮ್ ಪಾಂಘಾಲ್ ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಬುಧವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಟರ್ಕಿಯ ಎದುರಾಳಿ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಿಂದ ಹೀನಾಯವಾಗಿ ಸೋತಿದ್ದಾರೆ.

ಈ ಹಿಂದೆ ವಿನೇಶ್ ಫೋಗಟ್ ಸ್ಪರ್ಧಿಸುತ್ತಿದ್ದ 53 ಕೆಜಿ ವಿಭಾಗದಲ್ಲಿ ಕಣಕ್ಕಿಳಿದ ಅಂತಿಮ್ ಮೊದಲ ಸುತ್ತಿನಲ್ಲಿ 101 ಸೆಕೆಂಡ್ನಲ್ಲಿ ಎದುರಾಳಿಯ ವಿರುದ್ಧ ಸೋಲು ಕಂಡರು.

53 ಕೆಜಿ ವಿಭಾಗದಲ್ಲಿ ಅಂತಿಮ್ ಅದ್ಭುತ ಪ್ರದರ್ಶನ ನೀಡುತ್ತಿದ್ದ ಕಾರಣ ವಿನೇಶ್ ಒಲಿಂಪಿಕ್ಸ್ ಕೋಟಾಕ್ಕಾಗಿ ಕುಸ್ತಿ ಸ್ಪರ್ಧೆಗೆ ತನ್ನ ತೂಕ ವಿಭಾಗವನ್ನು 50 ಕೆಜಿಗೆ ಇಳಿಸಬೇಕಾಯಿತು.

ಟರ್ಕಿಯ ಕುಸ್ತಿಪಟು ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಭಾರತದ ಎದುರಾಳಿಯ ವಿರುದ್ಧ 10 ಅಂಕದಿಂದ ಸ್ಪಷ್ಟ ಮುನ್ನಡೆ ಪಡೆದರು. ಸಂಪೂರ್ಣ ಹಿಡಿತ ಸಾಧಿಸಿದ ಝೆನೆಪ್ ಮೇಲುಗೈ ಸಾಧಿಸಿದರು. ಒಂದು ವೇಳೆ ಝೆನೆಪ್ ಫೈನಲ್ಗೆ ಪ್ರವೇಶಿಸಿದರೆ ಅಂತಿಮ್ ಅವರು ರಿಪಿಚೇಜ್ ಸುತ್ತಿನಲ್ಲಿ ಆಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News