×
Ad

ನನ್ನನ್ನು ವಿಶ್ವಕಪ್‌ ಫೈನಲ್‌ಗೆ ಆಹ್ವಾನಿಸಿಲ್ಲ: ಕಪಿಲ್ ದೇವ್

Update: 2023-11-19 22:17 IST

 ಕಪಿಲ್ ದೇವ್ \ Photo: PTI

ಹೊಸದಿಲ್ಲಿ:  ಭಾರತ-ಆಸ್ಟ್ರೇಲಿಯ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ತನ್ನನ್ನು ಆಹ್ವಾನಿಸಿಲ್ಲ ಎಂದು ಭಾರತದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ರವಿವಾರ ಹೇಳಿದ್ದಾರೆ. 

ಕಪಿಲ್ ದೇವ್ ಅವರ ನೇತೃತ್ವದಲ್ಲಿ ಭಾರತ ತಂಡ 1983ರಲ್ಲಿ ಚೊಚ್ಚಲ ವಿಶ್ವ ಕಪ್ ಗೆದ್ದಿತ್ತು. 

ತಾನು ತನ್ನ ಹಿಂದಿನ ತಂಡದ ಸದಸ್ಯರೊಂದಿಗೆ ಪಂದ್ಯಕ್ಕೆ ಹೋಗಲು ಬಯಸಿದ್ದೆ ಎಂದು ಕಪಿಲ್ ದೇವ್ ಹೇಳಿದ್ದಾರೆ. 

ಭಾರತದ ಇತರ ಮಾಜಿ ಕ್ಯಾಪ್ಟನ್ ಗಳಲ್ಲಿ ಸೌರವ್ ಗಂಗೂಲಿ ಅವರು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದರು. ಅವರು ಬಿಸಿಸಿಐಯ ಮಾಜಿ ಅಧ್ಯಕ್ಷರಾಗಿರುವ ಕಾರಣಕ್ಕೆ ಆಹ್ವಾನಿಸಲಾಗಿದೆ. ಬಿಸಿಸಿಐಯ ಮಾಜಿ ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ಆಹ್ವಾನಿಸುವುದು ಬಿಸಿಸಿಐಯ ನಿಯಮವಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News