×
Ad

ಏಕದಿನ ಕ್ರಿಕೆಟ್‌| ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ ಡ್ಯಾರಿಲ್ ಮಿಚೆಲ್

Update: 2026-01-18 20:04 IST

ಡ್ಯಾರಿಲ್ ಮಿಚೆಲ್|Photo: X/@ESPNcricinfo

ಹೊಸದಿಲ್ಲಿ, ಜ.18: ನ್ಯೂಝಿಲ್ಯಾಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಏಕದಿನ ಕ್ರಿಕೆಟ್‌ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಭಾರತ ವಿರುದ್ಧ ರವಿವಾರ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.

ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶತಕ ಸಿಡಿಸುವ ಮೂಲಕ ಮಿಚೆಲ್ ಅವರು 2023ರ ನಂತರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ 50 ಪ್ಲಸ್ ಸ್ಕೋರ್ ಗಳಿಸಿದ ಬಾಬರ್ ಆಝಂ ಅವರ ದಾಖಲೆಯನ್ನು ಸರಿಗಟ್ಟಿದರು.

ಈ ಎಲೈಟ್ ಲಿಸ್ಟ್‌ನಲ್ಲಿ ಕೇವಲ ವಿರಾಟ್ ಕೊಹ್ಲಿ ಮಾತ್ರ ಅಗ್ರ ಸ್ಥಾನದಲ್ಲಿದ್ದಾರೆ.

ಪ್ರವಾಸಿ ಕಿವೀಸ್ ತಂಡವು ಎರಡು ಓವರ್‌ನೊಳಗೆ 2 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿದ್ದು ಭಾರತೀಯ ಬೌಲರ್‌ಗಳು ಶಿಸ್ತುಬದ್ದ ಬೌಲಿಂಗ್ ಮೂಲಕ ಒತ್ತಡ ಸೃಷ್ಟಿಸಿದರು. ಇಂತಹ ಪರಿಸ್ಥಿತಿಯಲ್ಲಿ ಕ್ರೀಸಿಗಿಳಿದ ಮಿಚೆಲ್ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು.

2023ರ ನಂತರ ಏಕದಿನ ಕ್ರಿಕೆಟ್‌ನಲ್ಲಿ ಸರ್ವಾಧಿಕ 50 ಪ್ಲಸ್ ಸ್ಕೋರ್ ಗಳಿಸಿದವರು

ವಿರಾಟ್ ಕೊಹ್ಲಿ(22)

ಶುಭಮನ್ ಗಿಲ್(20)

ರೋಹಿತ್ ಶರ್ಮಾ(19)

ಪಥುಮ್ ನಿಸ್ಸಾಂಕ(19)

ಬಾಬರ್ ಆಝಂ(18)

ಕುಸಾಲ್ ಮೆಂಡಿಸ್(18)

ಡ್ಯಾರಿಲ್ ಮಿಚೆಲ್(18)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News