×
Ad

ಪ್ಯಾರಿಸ್ ಒಲಿಂಪಿಕ್ಸ್ | ಶ್ರಿಜೇಶ್‌ ಹಾಕಿಯ ದಂತಕತೆ ; ಮುಂದಿನ ತಲೆಮಾರಿಗೆ ಪ್ರೇರಣೆಯಾಗಬಲ್ಲರು : ಸಹ ಆಟಗಾರರು

Update: 2024-08-10 20:35 IST

PC : PTI 

ಹೊಸದಿಲ್ಲಿ: ಸತತ ಎರಡನೆ ಒಲಿಂಪಿಕ್ಸ್ ಕಂಚು ಪದಕವನ್ನು ಜಯಿಸಿದ ನಂತರ ಭಾರತೀಯ ಪುರುಷರ ಹಾಕಿ ತಂಡವು ತವರಿಗೆ ಮರಳಿದ್ದು, ಇತ್ತೀಚೆಗಷ್ಟೆ ನಿವೃತ್ತರಾಗಿರುವ ಭಾರತದ ಗೋಲ್ ಕೀಪರ್ ಪಿ.ಆರ್. ಶ್ರಿಜೇಶ್‌ ಹಾಕಿಯ ದಂತಕತೆಯಾಗಿದ್ದು, ಅವರು ಮುಂದಿನ ತಲೆಮಾರಿನ ಆಟಗಾರರಿಗೆ ಪ್ರೇರಣೆಯಾಗಬಲ್ಲರು ಎಂದು ಅವರ ಸಹ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.

ಎಂಟು ಬಾರಿಯ ಒಲಿಂಪಿಕ್ ಚಾಂಪಿಯನ್ ಆಗಿರುವ ಭಾರತ ತಂಡವು, ಪ್ಲೇ ಆಫ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಅಂತರದಲ್ಲಿ ಮಣಿಸುವ ಮೂಲಕ ಸತತ ಎರಡನೆಯ ಬಾರಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದೆ. ಭಾರತ ಹಾಕಿ ತಂಡವು ಕೊಟ್ಟ ಕೊನೆಯ ಚಿನ್ನದ ಪದಕ ಜಯಿಸಿದ್ದು 1980ರಲ್ಲಿ.

ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಫಾರ್ವರ್ಡ್ ಆಟಗಾರ ಲಲಿತ್ ಉಪಾಧ್ಯಾಯ, “ಶ್ರಿಜೇಶ್‌ ಅತ್ಯುತ್ತಮ ವ್ಯಕ್ತಿ, ದಂತಕತೆ. ಅವರನ್ನು ಭಾರತವು ‘ಮಹಾ ಗೋಡೆ’ ಎಂದು ಕರೆಯುತ್ತದೆ. ಅವರು ತಮ್ಮ ಅತ್ಯುತ್ತಮ ಹಾಕಿಯನ್ನು ಆಡಿದ್ದಾರೆ ಎಂದಷ್ಟೆ ನಾನು ಹೇಳಬಲ್ಲೆ. ಹಾಕಿಯನ್ನು ಆಡುವ ಮೂಲಕ ಅವರು ದೇಶಕ್ಕೆ ಕೊಡುಗೆ ನೀಡಿದ್ದಾರೆ ಹಾಗೂ ಗೋಲ್ ಕೀಪರ್ ಆಗಿ ಅವರು ನಿರ್ಮಿಸಿರುವ ಮಾಪನವು ಮುಂದಿನ ತಲೆಮಾರನ್ನು ಪ್ರೇರೇಪಿಸಲಿದೆ” ಎಂದು ಶ್ಲಾಘಿಸಿದರು.

ರಕ್ಷಣಾ ಆಟಗಾರ ಜರ್ಮನ್ ಪ್ರೀತ್ ಸಿಂಗ್ ಅವರು ಶ್ರಿಜೇಶ್‌ ಅವರ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News