×
Ad

ಒಲಿಂಪಿಕ್ಸ್ ಬ್ಯಾಡ್ಮಿಂಟನ್ | ಆಕ್ಸೆಲ್‌ಸನ್ ಸಿಂಗಲ್ಸ್ ಚಾಂಪಿಯನ್

Update: 2024-08-05 21:58 IST

ವಿಕ್ಟರ್ ಆಕ್ಸೆಲ್‌ಸನ್ | PC :olympics.com

ಪ್ಯಾರಿಸ್ : ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್‌ಸನ್ ಮತ್ತೊಮ್ಮೆ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಸೋಮವಾರ ಕೇವಲ 52 ನಿಮಿಷಗಳಲ್ಲಿ ಅಂತ್ಯಗೊಂಡ ಫೈನಲ್ ಪಂದ್ಯದಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಆಕ್ಸೆಲ್‌ಸನ್ ಅವರು ಥಾಯ್ಲೆಂಡ್‌ನ ಕುನ್ಲವುಟ್ ವಿಟಿಡ್‌ಸರ್ನ್‌ರನ್ನು 21-11, 21-11 ನೇರ ಗೇಮ್‌ಗಳ ಅಂತರದಿಂದ ಮಣಿಸಿ ಪುರುಷರ ಸಿಂಗಲ್ಸ್ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡರು.

ಆಕ್ಸೆಲ್‌ಸನ್ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಸತತ ಚಿನ್ನದ ಪದಕ ಜಯಿಸಿದ ಮೊದಲ ಯುರೋಪಿಯನ್ ಆಟಗಾರ ಎನಿಸಿಕೊಂಡರು.

ಮಲೇಶ್ಯದ ಲೀ ಝಿ ಜಿಯಾ ಭಾರತದ ಲಕ್ಷ್ಯ ಸೇನ್‌ರನ್ನು ಸೋಲಿಸಿ ಕಂಚಿನ ಪದಕ ಜಯಿಸಿದರು.

ಚೀನಾ ದೇಶವು ಬ್ಯಾಡ್ಮಿಂಟನ್‌ನಲ್ಲಿ 2 ಬೆಳ್ಳಿ ಹಾಗೂ 3 ಕಂಚು ಸಹಿತ ಒಟ್ಟು 5 ಪದಕಗಳನ್ನು ಜಯಿಸಿದರೆ, ದಕ್ಷಿಣ ಕೊರಿಯಾ, ಜಪಾನ್ ಹಾಗೂ ಮಲೇಶ್ಯ ತಲಾ 2 ಪದಕ ಜಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News