×
Ad

ಪ್ಯಾರಿಸ್ ಒಲಿಂಪಿಕ್ಸ್: ಪ್ರಿ ಕ್ವಾರ್ಟರ್ ಹಂತದಲ್ಲಿ ಪ್ರಣಯ್ ಗೆ ಲಕ್ಷ್ಯ ಸೇನ್ ಎದುರಾಳಿ

Update: 2024-08-01 07:42 IST

PC: x.com/sportwalkmedia

ಪ್ಯಾರೀಸ್: ಒಲಿಂಪಿಕ್ಸ್ ಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಭರವಸೆಯ ಕ್ರೀಡಾಪಟು ಎಚ್.ಎಸ್.ಪ್ರಣಯ್ ಪ್ರಿ ಕ್ವಾರ್ಟರ್ ಫೈನಲ್ ಹಂತದ ಸ್ಪರ್ಧೆಯಲ್ಲಿ ಸಹ ಆಟಗಾರ ಲಕ್ಷ್ಯ ಸೇನ್ ಅವರನ್ನು ಎದುರಿಸಲಿದ್ದಾರೆ.

ವಿಯೆಟ್ನಾಂನ ಡ್ಯೂಕ್ ಫತ್ ಲೇ ಅವರನ್ನು ಮೂರು ಸೆಟ್ ಗಳ ಹೋರಾಟದಲ್ಲಿ ಮಣಿಸಿದ ಪ್ರಣಯ್ 16ರ ಹಂತಕ್ಕೆ ಮುನ್ನಡೆದರು. ಇದಕ್ಕೂ ಮುನ್ನ ಲಕ್ಷ್ಯ ಸೇನ್ ಜೋನಾಥನ್ ಕ್ರಿಸ್ಟಿ ವಿರುದ್ಧ ಗೆದ್ದು ಮುನ್ನಡೆ ಸಾಧಿಸಿದ್ದರು. ಮಹಿಳಾ ಸಿಂಗಲ್ಸ್ ನಲ್ಲಿ ಭಾರತದ ಪಿ.ವಿ.ಸಿಂಧು ಕೂಡಾ 16ರ ಘಟ್ಟಕ್ಕೆ ಮುನ್ನಡೆದಿದ್ದಾರೆ.

ಬಾಕ್ಸರ್ ಗಳಾದ ಲೊವ್ಲಿನಾ ಬೊರ್ಗೊಹೈನ್ (ಮಹಿಳೆಯರ 75 ಕೆ.ಜಿ) ಮತ್ತು ನಿಶಾಂತ್ ದೇವ್ (ಪುರುಷರ 71 ಕೆಜಿ) ವಿಭಾಗಗಳಲ್ಲಿ ಕ್ವಾರ್ಟರ್ ಫೈನಲ್ ಗೆ ಮುನ್ನಡೆದು, ತಮ್ಮ ವಿಭಾಗಗಳಲ್ಲಿ ಪದಕ ಪಡೆಯುವ ಅವಕಾಶದಿಂದ ಒಂದು ಹೆಜ್ಜೆ ಮಾತ್ರ ಹಿಂದಿದ್ದಾರೆ.

ಆದರೆ ಟೇಬಲ್ ಟೆನಿಸ್ ತಾರೆ ಮಣಿಕಾ ಬಾತ್ರ ಮತ್ತು ಶ್ರೀಜಾ ಅಕುಲಾ 16ರ ಘಟ್ಟದ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಬಿಲ್ಲುಗಾರಿಕೆಯಲ್ಲಿ ತರುಣ್ ದೀಪ್ ರಾಯ್ 64ರ ಘಟ್ಟದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ನ ಟಾಮ್ ಹಾಲ್ ವಿರುದ್ಧ ಸೋತು ಹೊರಬಿದ್ದರೆ, ದೀಪಿಕಾ ಕುಮಾರಿ ನೆದರ್ಲೆಂಡ್ಸ್ ನ ಕ್ವಿಂಟಿ ರೊಫೆನ್ ವಿರುದ್ಧ 6-2 ಸುಲಭ ಜಯ ಸಾಧಿಸಿ 16ನೇ ಸುತ್ತು ತಲುಪಿದ್ದಾರೆ. ಶೂಟರ್ ಸ್ವಪ್ನಿಲ್ ಕುಶಾಲ್ 50 ಮೀಟರ್ ರೈಫಲ್ 3 ಪೊಸಿಷನ್ ನಲ್ಲಿ ಫೈನಲ್ ತಲುಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News