×
Ad

ಫೋಗಟ್ ಅನರ್ಹಗೊಂಡಾಗ ಒಂದು ಐಟಿ ಸೆಲ್ ಸಂಭ್ರಮಿಸುತ್ತಿತ್ತು : ಬಜರಂಗ್‌ ಪೂನಿಯ

Update: 2024-09-06 20:00 IST

ವಿನೇಶ್ ಫೋಗಟ್ - ಬಜರಂಗ್‌ ಪೂನಿಯ | Photo : X

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ವಿನೇಶ್ ಫೈನಲ್‌ ಗೆ ತೇರ್ಗಡೆಯಾಗಿರುವುದನ್ನು ಇಡೀ ದೇಶ ಸಂಭ್ರಮಿಸಿತು. ಆದರೆ ಮರುದಿನ ಅವರು ಅನರ್ಹರಾದಾಗ ಪ್ರತಿಯೊಬ್ಬರೂ ದುಃಖಿತರಾದರು. ಆಗ, ಒಂದು ಐಟಿ ಸೆಲ್ ಸಂಭ್ರಮಿಸುತ್ತಿತ್ತು ಎಂದು ಬಜರಂಗ್‌ ಪೂನಿಯ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಜರಂಗ್‌ ಪೂನಿಯ, ಮಹಿಳೆಯರ ವಿರುದ್ಧ ದೌರ್ಜನ್ಯಗಳನ್ನು ಮಾಡುವವರಿಗೆ ಬಿಜೆಪಿಯು ಬೆಂಬಲ ನೀಡುತ್ತದೆ ಎಂದು ಆರೋಪಿಸಿದರು.

‘‘ನಾವು ರಾಜಕೀಯ ಮಾಡಲು ಬಯಸಿದ್ದೆವು ಎಂದು ಇಂದು ಬಿಜೆಪಿಯ ಐಟಿ ಸೆಲ್ ಹೇಳುತ್ತಿದೆ. ನಮ್ಮೊಂದಿಗೆ ನಿಲ್ಲುವಂತೆ ಕೋರಿ ಬಿಜೆಪಿಯ ಎಲ್ಲಾ ಮಹಿಳಾ ಸಂಸದರಿಗೆ ನಾವು ಪತ್ರ ಬರೆದಿದ್ದೆವು. ಆದರೆ ಅವರು ಯಾರೂ ಬರಲಿಲ್ಲ. ನಾವು ಮಹಿಳೆಯರ ಪರವಾಗಿ ಧ್ವನಿ ಎತ್ತಿದೆವು. ಬಿಜೆಪಿಯು ಮಹಿಳೆಯರ ವಿರುದ್ಧ ಅಪರಾಧಗಳನ್ನು ಮಾಡಿದವರ ಪರವಾಗಿ ನಿಲ್ಲುತ್ತದೆ ಎನ್ನುವುದು ಈಗ ನಮಗೆ ಗೊತ್ತಾಗಿದೆ. ಆದರೆ, ಇತರ ಎಲ್ಲಾ ಪಕ್ಷಗಳು ನಮ್ಮೊಂದಿಗೆ ನಿಂತಿವೆ. ಕಾಂಗ್ರೆಸ್ ಪಕ್ಷ ಮತ್ತು ದೇಶವನ್ನು ಬಲಗೊಳಿಸಲು ನಾವು ಕಠಿಣ ಪರಿಶ್ರಮ ಪಡುತ್ತೇವೆ’’ , ಎಂದು ಪೂನಿಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News