×
Ad

ಶೂನ್ಯಕ್ಕೆ ಔಟ್: ಹತಾಶೆಯಿಂದ ಸೋಫಾಕ್ಕೆ ಗುದ್ದಿದ ಕೊಹ್ಲಿ; ವಿಡಿಯೋ ವೈರಲ್

Update: 2023-10-29 22:28 IST

Photo- PTI

ಲಕ್ನೋ: ರವಿವಾರ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿ ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡಿದರು.

ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಕೊಹ್ಲಿ ಒಂಭತ್ತು ಎಸೆತಗಳನ್ನು ಎದುರಿಸಿ ಒಂದೂ ರನ್ ಮಾಡದೆ ಡೇವಿಡ್ ವಿಲ್ಲಿಗೆ ವಿಕೆಟ್ ಒಪ್ಪಿಸಿದರು. ವಿಲ್ಲಿಯ ಶಾರ್ಟ್ ಆಫ್ ಲೆಂತ್ ಎಸೆತವನ್ನು ತಪ್ಪಾಗಿ ನಿಭಾಯಿಸಿದ ಕೊಹ್ಲಿ ಬೆನ್ ಸ್ಟೋಕ್ಸ್ಗೆ ಸುಲಭ ಕ್ಯಾಚ್ ನೀಡಿದರು. ಆಗ ಲಕ್ನೋದ ಏಕಾನ ಸ್ಟೇಡಿಯಮ್ನಲ್ಲಿ ಜಮಾಯಿಸಿದ್ದ ಪ್ರೇಕ್ಷಕರು ಒಂದು ಕ್ಷಣ ಆಘಾರತಗೊಂಡರು.

ಕೊಹ್ಲಿ ಈ ಪಂದ್ಯಾವಳಿಯಲ್ಲಿ ಈವರೆಗೆ ಅತ್ಯುತ್ತಮ ನಿರ್ವಹಣೆಯನ್ನು ನೀಡುತ್ತಾ ಬಂದಿದ್ದಾರೆ. ಅವರು ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ವಿಶ್ವಕಪ್ ಪಂದ್ಯಗಳಲ್ಲಿ ಅವರು ಶೂನ್ಯ ಗಳಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಶೂನ್ಯಕ್ಕೆ ಔಟಾದ ಬಳಿಕ ಕೊಹ್ಲಿ ಅತ್ಯಂತ ಹತಾಶೆಗೊಳಗಾದವರಂತೆ ಕಂಡುಬಂದರು. ಡ್ರೆಸಿಂಗ್ ಕೋಣೆಯಲ್ಲಿ ಅವರು ಹತಾಶೆಯಿಂದ ಸೋಫಾಕ್ಕೆ ಗುದ್ದುತ್ತಿರುವುದನ್ನು ತೋರಿಸುವ ವೀಡಿಯೊ ಬಳಿಕ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News