×
Ad

ಪಾಕಿಸ್ತಾನದ ವಿರುದ್ಧ ಟಿ-20, ಏಕದಿನ ಸರಣಿ : ದಕ್ಷಿಣ ಆಫ್ರಿಕಾದ ಕ್ವೆನಾ ಮಫಾಕಾ ಅಲಭ್ಯ

Update: 2025-10-09 21:43 IST

ಕ್ವೆನಾ ಮಫಾಕಾ | Photo Credit : NDTV 

ಕೇಪ್‌ಟೌನ್, ಅ.9: ಮಂಡಿರಜ್ಜು ಸೆಳೆತದಿಂದ ಬಳಲುತ್ತಿರುವ ದಕ್ಷಿಣ ಆಫ್ರಿಕಾದ ಯುವ ಎಡಗೈ ವೇಗದ ಬೌಲರ್ ಕ್ವೆನಾ ಮಫಾಕಾ ಅವರು ನಮೀಬಿಯಾ ವಿರುದ್ಧ ಏಕೈಕ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ಹಾಗೂ ಪಾಕಿಸ್ತಾನದ ವಿರುದ್ಧ ಸಂಪೂರ್ಣ ಸೀಮಿತ ಓವರ್ ಕ್ರಿಕೆಟ್ ಸರಣಿಯಿಂದಲೇ ಹೊರಗುಳಿದಿದ್ದಾರೆ.

19ರ ಹರೆಯದ ಮಫಾಕಾ ಅವರ ಬದಲಿಗೆ ನಮೀಬಿಯಾ ಹಾಗೂ ಪಾಕಿಸ್ತಾನದ ವಿರುದ್ಧದ ಟಿ-20 ಸರಣಿಗೆ ವೇಗದ ಬೌಲರ್ ಒಟ್ನೀಲ್ ಬಾರ್ಟ್ಮನ್ ದಕ್ಷಿಣ ಆಫ್ರಿಕಾ ತಂಡವನ್ನು ಸೇರಿದ್ದಾರೆ.

ಪಾಕಿಸ್ತಾನದ ವಿರುದ್ದ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಲಿಝಾಡ್ ವಿಲಿಯಮ್ಸ್ ಬದಲಿ ಆಟಗಾರನಾಗಲಿದ್ದಾರೆ.

ಮಫಾಕಾ ಕಳೆದ ವಾರ ದೇಶೀಯ ಪಂದ್ಯದ ವೇಳೆ ಗಾಯಗೊಂಡಿದ್ದರು. ವೈದ್ಯಕೀಯ ತಪಾಸಣೆಯ ನಂತರ ಗಾಯ ಗುಣಮುಖವಾಗಲು 4 ವಾರಗಳ ಅಗತ್ಯವಿದೆ ಎಂದು ಗೊತ್ತಾಗಿದೆ.

ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನ ನೆಲದಲ್ಲಿ ಅಕ್ಟೋಬರ್ 28ರಿಂದ ನವೆಂಬರ್ 1ರ ತನಕ 3 ಟಿ-20 ಪಂದ್ಯಗಳನ್ನು ಆಡಲಿದೆ. ನವೆಂಬರ್ 4 ರಿಂದ 8ರ ತನಕ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News