Photo Credit: ANI

ಕರಾಚಿ, ಅ.18: ಆನ್‌ ಲೈನ್ ಬೆಟ್ಟಿಂಗ್, ಜೂಜಾಟ ಹಾಗೂ ಡ್ರೆಸ್ಸಿಂಗ್ ರೂಮ್‌ನ ಮಾಹಿತಿ ಸೋರಿಕೆ ಮಾಡಿದ ಆರೋಪಗಳ ಕುರಿತು ತನಿಖೆ ನಡೆಯುತ್ತಿರುವಾಗಲೇ ಪಾಕಿಸ್ತಾನದ ವಿಕೆಟ್‌ ಕೀಪರ್‌–ಬ್ಯಾಟರ್ ಮುಹಮ್ಮದ್ ರಿಝ್ವಾನ್‌ ಗೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅವಕಾಶ ನೀಡಿದೆ.

ಅ.19ರಿಂದ ಆರಂಭವಾಗಲಿರುವ ಪ್ರೆಸಿಡೆಂಟ್ಸ್ ಕಪ್ ಪ್ರಥಮ ದರ್ಜೆ ಟೂರ್ನಿಯಲ್ಲಿ ರಿಝ್ವಾನ್‌ ಗೆ ಆಡಲು ಪಿಸಿಬಿಯ ದೇಶೀಯ ವಿಭಾಗವು ಅನುಮತಿ ನೀಡಿರುವ ಕುರಿತು ಇ-ಮೇಲ್ ಸ್ವೀಕರಿಸಿದ್ದೇನೆ ಎಂದು ಪಾಕಿಸ್ತಾನದ ಮಾಜಿ ನಾಯಕ ಮುಹಮ್ಮದ್ ಹಫೀಝ್ ದೃಢಪಡಿಸಿದರು.

ಆಗಸ್ಟ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಬಳಿಕ ಇಂಗ್ಲೆಂಡ್‌ನಿಂದ ಸ್ವದೇಶಕ್ಕೆ ಕಳುಹಿಸಲ್ಪಟ್ಟಿದ್ದ ರಿಝ್ವಾನ್ ಹಾಗೂ ಪಾಕಿಸ್ತಾನದ ಇನ್ನೋರ್ವ ಆಟಗಾರ ಇಮಾಮ್ ಉಲ್ ಹಕ್‌ಗೆ ದೇಶೀಯ ಕ್ರಿಕೆಟ್ ಆಡಲು ನಿರ್ಬಂಧ ವಿಧಿಸಲಾಗಿತ್ತು. ಈ ಇಬ್ಬರ ಮೇಲೆ ಡ್ರೆಸ್ಸಿಂಗ್ ರೂಮ್‌ ನ ಮಾಹಿತಿ ಹಾಗೂ ಆನ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದ ವಿಷಯಗಳನ್ನು ಸೋರಿಕೆ ಮಾಡಿದ ಆರೋಪ ಹೊರಿಸಲಾಗಿತ್ತು.

ಲಾರ್ಡ್ಸ್‌ ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದ ಬಳಿಕ ರಿಝ್ವಾನ್ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಅವರು ಈವರೆಗೆ 47 ಟೆಸ್ಟ್, 103 ಏಕದಿನ ಹಾಗೂ 106 ಟಿ-20 ಪಂದ್ಯಗಳನ್ನಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor