×
Ad

ನ್ಯೂಝಿಲ್ಯಾಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆತಿಥ್ಯಕ್ಕೆ ಪಾಕಿಸ್ತಾನ ಸಜ್ಜು

Update: 2024-02-24 21:21 IST

Photo: NDTV 

ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಈ ವರ್ಷದ ಎಪ್ರಿಲ್ ನಲ್ಲಿ ವಿಶ್ವಕಪ್ ಟೂರ್ನಿಗಿಂತ ಮೊದಲು ನ್ಯೂಝಿಲ್ಯಾಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆತಿಥ್ಯವಹಿಸಲು ತಯಾರಿ ನಡೆಸುತ್ತಿದೆ.

ಸರಣಿಯ ದಿನಾಂಕ ಹಾಗೂ ಸ್ಥಳಗಳ ಕುರಿತು ಅಂತಿಮಗೊಳಿಸಲು ನ್ಯೂಝಿಲ್ಯಾಂಡ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಎಪ್ರಿಲ್ 13ರಿಂದ 24ರ ತನಕ ಸರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಪಿಸಿಬಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ತಯಾರಿಗೆ ಈ ಸರಣಿ ನೆರವಾಗಲಿದೆ. ಸರಣಿಯು ಲಾಹೋರ್ ಹಾಗೂ ರಾವಲ್ಪಿಂಡಿಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ 2024ರ ಜನವರಿಯಲ್ಲಿ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಿತ್ತು. ಆಗ ನ್ಯೂಝಿಲ್ಯಾಂಡ್ 4-1 ಅಂತರದಿಂದ ಸರಣಿ ಜಯಿಸಿತ್ತು.

ಅಮೆರಿಕ ಹಾಗೂ ವೆಸ್ಟ್ಇಂಡೀಸ್‌ ನ ಜಂಟಿ ಆತಿಥ್ಯದಲ್ಲಿ ಜೂನಿನಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗಿಂತ ಮೊದಲು ಪಾಕಿಸ್ತಾನ ತಂಡವು ಅಫ್ಘಾನಿಸ್ತಾನ, ನ್ಯೂಝಿಲ್ಯಾಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಪಂದ್ಯಗಳನ್ನು ಆಡಲಿದೆ.

ಪಾಕಿಸ್ತಾನವು ಕಳೆದೆರಡು ವರ್ಷಗಳಲ್ಲಿ ಅಗ್ರ ರ‍್ಯಾಂಕಿನ ತಂಡಗಳಾದ ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಹಲವಾರು ಸರಣಿಯ ಆತಿಥ್ಯವಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News