×
Ad

ಪ್ಯಾರಿಸ್ ಒಲಿಂಪಿಕ್ಸ್ | 10 ಮೀ ಮಹಿಳಾ ಏರ್ ರೈಫಲ್ ಸ್ಪರ್ಧೆಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟ ರಮಿತಾ ಜಿಂದಾಲ್

Update: 2024-07-28 14:59 IST

ರಮಿತಾ ಜಿಂದಾಲ್ (Photo credit:X/@htTweets)

ಪ್ಯಾರಿಸ್: 10 ಮೀ ಮಹಿಳಾ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ ರಮಿತಾ ಜಿಂದಾಲ್ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಅವರು ಐದನೆಯವರಾಗಿ ತಮ್ಮ ಪಂದ್ಯ ಮುಗಿಸಿದರು. ಆದರೆ, ಮತ್ತೊಬ್ಬ ಭಾರತೀಯ ಸ್ಪರ್ಧಿ ಎಲವೆನಿಲ್ ವಲರಿವನ್ ನಿರಾಶೆ ಅನುಭವಿಸಿದರು. ಅರ್ಹತಾ ಸುತ್ತಿನುದ್ದಕ್ಕೂ ರಮಿತಾ ಜಿಂದಾಲ್ ಮೇಲೆ ಮೇಲುಗೈ ಸಾಧಿಸಿದ್ದ ಎಲವೆನಿಲ್ ವಲರಿವನ್, ಈ ಸುತ್ತಿನಲ್ಲಿ ಮಾತ್ರ ಅವರಿಗಿಂತ ಹಿಂದೆ ಬಿದ್ದು, ಫೈನಲ್ ಗೆ ತಲುಪುವ ಅರ್ಹತೆಯಿಂದ ವಂಚಿತಗೊಂಡರು.

ಇಂದು ಮಧ್ಯಾಹ್ನ ನಡೆಯಲಿರುವ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ ಗೆ ಪ್ರವೇಶಿಸಿರುವ ಭಾರತೀಯ ಶೂಟರ್ ಮನು ಭಾಕರ್, ಭಾರತಕ್ಕೆ ಚೊಚ್ಚಲ ಪದಕ ತಂದುಕೊಡುವ ನಿರೀಕ್ಷೆ ಮೂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News