ಪ್ಯಾರಿಸ್ ಒಲಿಂಪಿಕ್ಸ್ 2024| ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತದ ರೋವರ್ ಬಾಲರಾಜ್ ಪನ್ವರ್
Update: 2024-07-28 15:06 IST
Photo credit:X/Team India
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರವಿವಾರ ಭಾರತದ ರೋವರ್ ಬಾಲರಾಜ್ ಪನ್ವರ್ ಅವರು ಪುರುಷರ ಸಿಂಗಲ್ ಸ್ಕಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದರು.
ರಪೆಚೇಜ್ ರೇಸ್ ಅನ್ನು 7 ಗಂಟೆ 12 ನಿಮಿಷ ಹಾಗೂ 41 ಸೆಕೆಂಡ್ ಗಳಲ್ಲಿ ಮುಕ್ತಾಯಗೊಳಿಸಿದ ಬಾಲರಾಜ್, ಎರಡನೆಯವರಾಗಿ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಗಿಟ್ಟಿಸಿದರು. ಇದಕ್ಕೂ ಮುನ್ನ ಶನಿವಾರ ನಡೆದಿದ್ದ ಹೀಟ್ಸ್ ನಲ್ಲಿ ಬಾಲ್ ರಾಜ್ ನಾಲ್ಕನೆಯವರಾಗಿ ತಮ್ಮ ರೇಸ್ ಅನ್ನು ಮುಕ್ತಾಯಗೊಳಿಸಿದ್ದರು. ಹೀಗಾಗಿ ಮೊದಲ ಮೂವರು ಸ್ಪರ್ಧಿಗಳು ಸ್ವಯಂಚಾಲಿತವಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು.