×
Ad

ಪ್ಯಾರಿಸ್ ಒಲಿಂಪಿಕ್ಸ್‌: ಭಾರತದ ಪುರುಷರ ಆರ್ಚರಿ ತಂಡಕ್ಕೆ ಸೋಲು

Update: 2024-07-29 22:13 IST

PC : Paris Olympics.com

ಪ್ಯಾರಿಸ್: ತರುಣ್‌ದೀಪ್ ರಾಯ್, ಧೀರಜ್ ಬೊಮ್ಮದೇವರ ಹಾಗೂ ಪ್ರವೀಣ್ ಜಾಧವ್ ಅವರನ್ನೊಳಗೊಂಡ ಭಾರತದ ಪುರುಷರ ರಿಕರ್ವ್ ಆರ್ಚರಿ ತಂಡವು ಒಲಿಂಪಿಕ್ ಗೇಮ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟರ್ಕಿಯ ವಿರುದ್ಧ ಸೋಲುಂಡಿದೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ತನ್ನ ಸವಾಲು ಅಂತ್ಯಗೊಳಿಸಿದೆ.

ಭಾರತೀಯ ತಂಡವು 2-6 ಅಂತರದಿಂದ ಸೋಲುಂಡಿದೆ. ಭಾರತವು ಮೊದಲೆರಡು ಸೆಟ್‌ನಲ್ಲಿ ಸೋತ ನಂತರ 3ನೇ ಸೆಟ್ ಗೆಲ್ಲಲು ಶಕ್ತವಾಯಿತು. ಆದರೆ ಟರ್ಕಿ ತಂಡ 4ನೇ ಸೆಟ್‌ನಲ್ಲಿ ಒಟ್ಟು 58 ಅಂಕ ಗಳಿಸಿ ಪ್ರಾಬಲ್ಯ ಮೆರೆಯಿತು. ಭಾರತವು ತನ್ನ ಕೊನೆಯ ಪ್ರಯತ್ನದಲ್ಲಿ ಒಟ್ಟು 54 ಸ್ಕೋರ್ ಗಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News