×
Ad

ಜೂಡೊ ಪಟು ತುಲಿಕಾಗೆ ಪ್ಯಾರಿಸ್ ಒಲಿಂಪಿಕ್ಸ್ ಕೋಟ

Update: 2024-06-25 21:31 IST

ಹೊಸದಿಲ್ಲಿ : ಭಾರತದ ತುಲಿಕಾ ಮಾನ್ರಿಗೆ ಜೂಡೊದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅರ್ಹತೆ ಲಭಿಸಿದೆ. ಅಂತರ್ರಾಷ್ಟ್ರೀಯ ಜೂಡೊ ಫೆಡರೇಶನ್ (ಐಜೆಎಫ್) ಮಂಗಳವಾರ ಪ್ರಕಟಿಸಿದ ರ್ಯಾಂಕಿಂಗ್ ಮೂಲಕ ಅವರು ಈ ಅರ್ಹತೆ ಗಳಿಸಿದ್ದಾರೆ.

2022ರಲ್ಲಿ ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ 25 ವರ್ಷದ ತುಲಿಕಾ ಬೆಳ್ಳಿ ಪದಕ ಗೆದ್ದಿದ್ದರು. ಅವರು ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಮಹಿಳೆಯರ +78 ಕೆಜಿ ವಿಭಾಗದಲ್ಲಿ ಕೋಟ ಪಡೆದಿದ್ದಾರೆ.

2022 ಜೂನ್ 22ರಿಂದ 2024 ಜೂನ್ 23ರವರೆಗಿನ ಅರ್ಹತಾ ಅವಧಿಯಲ್ಲಿ ತುಲಿಕಾ 1345 ರ್ಯಾಂಕಿಂಗ್ ಅಂಕಗಳನ್ನು ಗಳಿಸಿದ್ದಾರೆ. ಈ ಮೂಲಕ ಅವರು ಜಾಗತಿಕ ರ್ಯಾಂಕಿಂಗ್ನಲ್ಲಿ 36ನೇ ಸ್ಥಾನ ಪಡೆದಿದ್ದಾರೆ. ಇದರ ಆಧಾರದಲ್ಲಿ ಅವರು ಭಾರತಕ್ಕೆ ಒಲಿಂಪಿಕ್ ಕೋಟವನ್ನು ಸಂಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News