ಭಾರತದ ರಿಲೇ ತಂಡದ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ
Photo- PTI
ಹೊಸದಿಲ್ಲಿ: ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿರುವ 4-400 ರಿಲೇ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ರವಿವಾರ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಮೂಲಕ ಶ್ಲಾಘಿಸಿದರು.
ಮುಹಮ್ಮದ್ ಅನಸ್, ಅಮೋಜ್ ಜೇಕಬ್, ಮುಹಮ್ಮದ್ ಅಜ್ಮಲ್ ಹಾಗೂ ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತದ ರಿಲೇ ತಂಡವು ಶನಿವಾರ ಏಶ್ಯನ್ ದಾಖಲೆಯನ್ನು ಮುರಿದು ಹೀಟ್-1ರಲ್ಲಿ ಅಮೆರಿಕದ ನಂತರ 2ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದೆ. ರವಿವಾರ ತಡರಾತ್ರಿ ಫೈನಲ್ ಪಂದ್ಯವನ್ನು ಆಡಲಿದೆ.
ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಂಬಲಾಗದ ಟೀಮ್ ವರ್ಕ್! ಅನಸ್, ಅಮೋಜ್, ರಾಜೇಶ್ ರಮೇಶ್ ಹಾಗೂ ಮುಹಮ್ಮದ್ ಅಜ್ಮಲ್ ಅವರು 4-400 ಮೀ. ರಿಲೇಯಲ್ಲಿ ಹೊಸ ಏಶ್ಯನ್ ದಾಖಲೆ ನಿರ್ಮಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದು ವಿಜಯೋತ್ಸಾಹದ ಪುನರಾಗಮನವಾಗಿ ನೆನಪಿನಲ್ಲಿ ಉಳಿಯುತ್ತದೆ. ಭಾರತೀಯ ಅತ್ಲೆಟಿಕ್ಸ್ ಪಾಲಿಗೆ ಇದು ನಿಜವಾಗಿಯೂ ಐತಿಹಾಸಿಕ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.