ಪ್ರೊ ಕಬಡ್ಡಿ ಲೀಗ್ ಫೈನಲ್ | ದಬಾಂಗ್ ಡೆಲ್ಲಿಗೆ ಪುಣೇರಿ ಪಲ್ಟನ್ ಎದುರಾಳಿ
Photo Credit : olympics.com
ಹೊಸದಿಲ್ಲಿ, ಅ.30: ಪ್ರೊ ಕಬಡ್ಡಿ ಲೀಗ್ ಫೈನಲ್ ಪಂದ್ಯವು ಶುಕ್ರವಾರ ನಡೆಯಲಿದ್ದು, ದಬಾಂಗ್ ಡೆಲ್ಲಿ ಹಾಗೂ ಪುಣೇರಿ ಪಲ್ಟನ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಬುಧವಾರ ಕ್ವಾಲಿಫೈಯರ್-2ರಲ್ಲಿ ತೆಲುಗು ಟೈಟಾನ್ಸ್ ತಂಡವನ್ನು 7 ಅಂಕಗಳಿಂದ ಮಣಿಸಿದ ಪುಣೇರಿ ತಂಡವು ಫೈನಲ್‌ಗೆ ಪ್ರವೇಶಿಸಿದೆ. ಟೈಟಾನ್ಸ್ ತಂಡ ಉತ್ತಮ ಆರಂಭ ಪಡೆದಿತ್ತು. ಆದರೆ ಮರು ಹೋರಾಟ ನೀಡಿದ ಪುಣೇರಿ ಗೆಲುವಿನ ನಗೆ ಬೀರಿತು.
ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ಪುಣೇರಿ 18 ಪಂದ್ಯಗಳಲ್ಲಿ 13ರಲ್ಲಿ ಜಯ ಸಾಧಿಸಿ ಕೇವಲ 5ರಲ್ಲಿ ಸೋತಿದ್ದು, ಒಟ್ಟು 26 ಅಂಕ ಕಲೆ ಹಾಕಿದೆ. ದಬಾಂಗ್ ಡೆಲ್ಲಿ ತಂಡ ಕೂಡ 18 ಪಂದ್ಯಗಳಲ್ಲಿ 13ರಲ್ಲಿ ಜಯ ಸಾಧಿಸಿ 26 ಅಂಕ ಗಳಿಸಿದೆ. ಆದರೆ ಗೋಲು ವ್ಯತ್ಯಾಸದಲ್ಲಿ ಮೇಲುಗೈ ಸಾಧಿಸಿರುವ ಪುಣೇರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಕ್ವಾಲಿಫೈಯರ್-1ರಲ್ಲಿ ಪುಣೇರಿ ತಂಡವನ್ನು ಟೈ-ಬ್ರೇಕರ್‌ನಲ್ಲಿ 6-4 ಅಂತರದಿಂದ ಮಣಿಸಿದ ದಬಾಂಗ್ ಡೆಲ್ಲಿ 12ನೇ ಆವೃತ್ತಿಯ ಲೀಗ್‌ನಲ್ಲಿ ಫೈನಲ್‌ಗೆ ತಲುಪಿತು. ಪುಣೇರಿ ಬುಧವಾರ ನಡೆದ ಕ್ವಾಲಿಫೈಯರ್-2ರಲ್ಲಿ ಜಯ ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ.