×
Ad

ಬಿಡಬ್ಲ್ಯುಎಫ್ ಅತ್ಲೀಟ್‍ ಗಳ ಆಯೋಗದ ಅಧ್ಯಕ್ಷೆಯಾಗಿ ಪಿ.ವಿ. ಸಿಂಧು ಆಯ್ಕೆ

Update: 2025-12-26 21:59 IST

 ಪಿ.ವಿ. ಸಿಂಧು | Photo Credit : PTI 

ಹೊಸದಿಲ್ಲಿ, ಡಿ. 26: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಹಾಗೂ ಮಾಜಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು 2026-29ರ ಅವಧಿಗೆ ಬಿಡಬ್ಲ್ಯುಎಫ್ ಅತ್ಲೀಟ್‍ ಗಳ ಆಯೋಗದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ತನ್ನ ಈ ಹುದ್ದೆಯ ಆಧಾರದಲ್ಲಿ ಸಿಂಧು ಬ್ಯಾಡ್ಮಿಂಟನ್ ವಿಶ್ವ ಫೆಡರೇಶನ್ (ಬಿಡಬ್ಲ್ಯುಎಫ್) ಕೌನ್ಸಿಲ್‍ ನ ಸದಸ್ಯೆಯಾಗಿಯೂ ಅವರು ಸೇವೆ ಸಲ್ಲಿಸಲಿದ್ದಾರೆ. ಈ ಮೂಲಕ ಅವರು ಕ್ರೀಡೆಯ ಜಾಗತಿಕ ಆಡಳಿತದಲ್ಲಿ ಆಟಗಾರರ ಪ್ರತಿನಿಧಿಯಾಗಿ ಕೆಲಸ ಮಾಡಲಿದ್ದಾರೆ.

ತನ್ನನ್ನು ಈ ಹುದ್ದೆಗೆ ಆರಿಸಿರುವುದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಹಿಂದಿನ ಅವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿರುವುದಕ್ಕಾಗಿ ಇಂಡೋನೇಶ್ಯದ ಗ್ರೇಸಿಯಾ ಪೋಲಿಯಿ ಅವರನ್ನು ಅಭಿನಂದಿಸಿದ್ದಾರೆ.

“ಈ ಹುದ್ದೆಗೆ ನನ್ನನ್ನು ಸಹ ಆಟಗಾರರು ಆರಿಸಿರುವುದು ನನಗೆ ಸಿಕ್ಕ ಗೌರವವಾಗಿದೆ. ಇದನ್ನು ನಾನು ವಿನಯ ಮತ್ತು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ಇದೇ ಸಂದರ್ಭದಲ್ಲಿ, ಹಿಂದಿನ ಅವಧಿಯಲ್ಲಿ ಗ್ರೇಸಿಯಾ ಪೋಲಿಯಿ ಸಲ್ಲಿಸಿದ ಅಮೋಘ ಸೇವೆಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ’’ ಎಂದು ಸಿಂಧು ಹೇಳಿದ್ದಾರೆ.

ನೆದರ್‍ಲ್ಯಾಂಡ್ಸ್ ನ ದೆಬೋರಾ ಜಿಲಿ ಆಯೋಗದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಲಿದ್ದಾರೆ. ಆಯೋಗದಲ್ಲಿರುವ ಇತರ ಆಟಗಾರರ ಪ್ರತಿನಿಧಿಗಳೆಂದರೆ- ಹಾಲಿ ಒಲಿಂಪಿಕ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ದಕ್ಷಿಣ ಕೊರಿಯದ ಆನ್ ಸೆ ಯಂಗ್, ಆರು ಬಾರಿಯ ಆಫ್ರಿಕನ್ ಗೇಮ್ಸ್ ಪದಕ ವಿಜೇತೆ ಈಜಿಪ್ಟ್‍ನ ದೋಹಾ ಹನಿ ಮತ್ತು ಪ್ಯಾರಿಸ್ ಒಲಿಂಪಿಕ್ಸ್ 2024ರ ಡಬಲ್ಸ್ ಚಿನ್ನ ವಿಜೇತೆ ಚೀನಾದ ಜಿಯಾ ಯಿಫಾನ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News