ಅಫ್ಘಾನಿಸ್ತಾನ ಕ್ರಿಕೆಟ್ ನ ಸಹಾಯಕ ಕೋಚ್ ಆಗಿ ಆರ್. ಶ್ರೀಧರ್ ನೇಮಕ
Update: 2024-08-22 11:53 IST
ಆರ್. ಶ್ರೀಧರ್ (Photo: PTI)
ಹೊಸದಿಲ್ಲಿ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿ ಟೀಂ ಇಂಡಿಯಾದ ಮಾಜಿ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ನೇಮಕವಾಗಿದ್ದಾರೆ.
ರವಿ ಶಾಸ್ತ್ರಿ ಅವರು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ವೇಳೆ ಆರ್. ಶ್ರೀಧರ್ ಅವರು ಫೀಲ್ಡಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು. ಇದೀಗ 54 ವರ್ಷದ ಶ್ರೀಧರ್ ಅವರು ಅಫ್ಘಾನಿಸ್ಥಾನ ತಂಡದ ಕೋಚಿಂಗ್ ಮಂಡಳಿಗೆ ಸೇರಿದ್ದಾರೆ.
ಇತ್ತೀಚೆಗಷ್ಟೇ ಕನ್ನಡಿಗ ದೊಡ್ಡ ಗಣೇಶ್ ಅವರು ಕೀನ್ಯಾ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು.
ಮಾಜಿ ಲೆಗ್ ಸ್ಪಿನ್ನರ್ ಶ್ರೀಧರ್ ಅವರು 2008ರಿಂದ 2014ರವರೆಗೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಹಾಯಕ ಫೀಲ್ಡಿಂಗ್ ಕೋಚ್ ಮತ್ತು ಸ್ಪಿನ್ ಕೋಚ್ ಆಗಿದ್ದರು. 2014ರ ಭಾರತದ ಅಂಡರ್ 19 ವಿಶ್ವಕಪ್ ತಂಡದ ಕೋಚ್ ಆಗಿದ್ದರು. ಅವರು ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ.