×
Ad

ನಿವೃತ್ತಿಯ ಬಗ್ಗೆ ಗಮನವಿಲ್ಲ, ತಂಡ ಗೆಲ್ಲಿಸಲು ಯತ್ನ ; ಡೇವಿಸ್ ಕಪ್ ಫೈನಲ್ಸ್ ಬಗ್ಗೆ ರಫೇಲ್ ನಡಾಲ್

Update: 2024-11-18 21:52 IST

ರಫೇಲ್ ನಡಾಲ್ | PC : PTI 

ಮಲಗ (ಸ್ಪೇನ್ ) : ಸ್ಪೇನ್ನ ಮಲಗದಲ್ಲಿ ನಡೆಯಲಿರುವ ಡೇವಿಸ್ ಕಪ್ ಫೈನಲ್ಸ್ನಲ್ಲಿ ನಾನು ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿಲ್ಲ, ಬದಲಿಗೆ ಸ್ಪೇನ್ ಪ್ರಶಸ್ತಿಯನ್ನು ಗೆಲ್ಲಲು ನಾನು ಯಾವ ನೆರವು ನೀಡಬಹುದು ಎನ್ನುವ ಬಗ್ಗೆ ಗಮನ ಹರಿಸಿದ್ದೇನೆ ಎಂದು ಸ್ಪೇನ್ ನ ಟೆನಿಸ್ ದಿಗ್ಗಜ ರಫೇಲ್ ನಡಾಲ್ ಸೋಮವಾರ ಹೇಳಿದ್ದಾರೆ.

22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ಸರದಾರ ನಡಾಲ್ ತನ್ನ ಎರಡು ದಶಕಗಳಿಗೂ ಹೆಚ್ಚಿನ ಅವಧಿಯ ಕ್ರೀಡಾ ಜೀವನಕ್ಕೆ ಡೇವಿಸ್ ಕಪ್ನಲ್ಲಿ ವಿದಾಯ ಕೋರಲು ನಿರ್ಧರಿಸಿದ್ದಾರೆ. ಏಳನೇ ಬಾರಿಗೆ ಪ್ರಶಸ್ತಿ ಗೆಲ್ಲಲು ನೆರವಾಗುವುದಾದರೆ, ತಾನು ಡಬಲ್ಸ್ ಪಂದ್ಯಗಳಲ್ಲಿ ಮಾತ್ರ ಆಡಬಹುದು ಎಂಬ ಇಂಗಿತವನ್ನು ಅವರು ಈಗಾಗಲೇ ವ್ಯಕ್ತಪಡಿಸಿದ್ದಾರೆ.

‘‘ನಾನು ಅಂಗಣದಲ್ಲಿದ್ದರೆ, ನನ್ನ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇನೆ. ನಾನು ನಿವೃತ್ತಿಗೊಳ್ಳಲು ಇಲ್ಲಿಗೆ ಬಂದಿಲ್ಲ. ನನ್ನ ತಂಡದ ಗೆಲುವಿಗೆ ನೆರವು ನೀಡಲು ಬಂದಿದ್ದೇನೆ. ತಂಡ ಸ್ಪರ್ಧೆಯೊಂದರಲ್ಲಿ ಇದು ನನ್ನ ಕೊನೆಯ ವಾರವಾಗಿದೆ. ಅತ್ಯಂತ ಮುಖ್ಯ ವಿಷಯವೆಂದರೆ, ತಂಡದ ಗೆಲುವಿಗೆ ನೆರವು ನೀಡುವುದು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನಡಾಲ್ ಹೇಳಿದರು.

‘‘ಕೊನೆಯಲ್ಲಿ ಭಾವನೆಗಳು ಬರುತ್ತವೆ. ಅದಕ್ಕಿಂತ ಮೊದಲು ಮತ್ತು ನಂತರ ನಾನು ಏನು ಮಾಡಬೇಕೋ ಅದರ ಮೇಲೆ ಗಮನ ಹರಿಸುತ್ತೇನೆ’’ ಎಂದು ನಡಾಲ್ ಹೇಳಿದರು.

‘‘ಈ ವಾರದ ಬಳಿಕ, ನನ್ನ ಬದುಕಿನಲ್ಲಿ ದೊಡ್ಡ ಬದಲಾವಣೆಯಾಗಲಿದೆ. ನಾನು ರೋಮಾಂಚಿತನಾಗಿದ್ದೇನೆ ಮತ್ತು ಇಲ್ಲಿಗೆ ಬರಲು ಸಂತೋಷವಾಗಿದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News