×
Ad

ಚೊಚ್ಚಲ ಟೆಕ್ವಾಂಡೋ ಪ್ರೀಮಿಯರ್ ಲೀಗ್ ಗೆದ್ದ ರಾಜಸ್ಥಾನ ರೆಬೆಲ್ಸ್

Update: 2023-06-26 23:19 IST

ಫೋಟೋ: twitter/KhelNow

ಹೊಸದಿಲ್ಲಿ: ಚೊಚ್ಚಲ ಆವೃತ್ತಿಯ ಟೆಕ್ವಾಂಡೋ ಪ್ರೀಮಿಯರ್ ಲೀಗ್ (ಟಿಪಿಎಲ್)ನಲ್ಲಿ ಚಾಂಪಿಯನ್ ಆಗುವ ಮೂಲಕ ರಾಜಸ್ಥಾನ ರೆಬೆಲ್ಸ್ ತಂಡ ಇತಿಹಾಸ ರಚಿಸಿದೆ. ರವಿವಾರ ತಡರಾತ್ರಿ ನಡೆದ ಫೈನಲ್ನಲ್ಲಿ ರಾಜಸ್ಥಾನ ತಂಡವು ಡೆಲ್ಲಿ ವಾರಿಯರ್ಸ್ ವಿರುದ್ಧ ಜಯಭೇರಿ ಬಾರಿಸಿತು.

ಭಾರೀ ರೋಚಕತೆಯಿಂದ ಕೂಡಿದ್ದ ಡೆಲ್ಲಿ ವಿರುದ್ಧದ ಫೈನಲ್ನಲ್ಲಿ ರಾಜಸ್ಥಾನ 2-1 ಅಂತರದಲ್ಲಿ ಗೆಲುವು ಪಡೆಯಿತು.

ಬೆಂಗಳೂರು ತಂಡಕ್ಕೆ ಕ್ವಾರ್ಟರ್ನಲ್ಲಿ ಸೋಲು: ಟಿಪಿಎಲ್ನಲ್ಲಿ ಬೆಂಗಳೂರು ಮೂಲದ ತಂಡವಾದ ಬೆಂಗಳೂರು ನಿಂಜಾಸ್ ಸಹ ಪಾಲ್ಗೊಂಡಿತ್ತು. ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ತಂಡ, ಕ್ವಾರ್ಟರ್ ಫೈನಲ್ನಲ್ಲಿ ಮುಗ್ಗರಿಸಿತು. ಪಂಜಾಬ್ ರಾಯಲ್ಸ್ ವಿರುದ್ಧ ಬೆಂಗಳೂರು ತಂಡ 1-2 (10-9, 6-8, 2-5)ರಲ್ಲಿ ಸೋತು ಹೊರಬಿತ್ತು. ಚೊಚ್ಚಲ ಆವೃತ್ತಿಯ ಟೆಕ್ವಾಂಡೋ ಪ್ರೀಮಿಯರ್ ಲೀಗ್ನಲ್ಲಿ ಒಟ್ಟು 12 ತಂಡಗಳು ಪಾಲ್ಗೊಂಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News