×
Ad

ರಣಜಿ: ಮಧ್ಯಪ್ರದೇಶ ತಂಡದ ನಾಯಕ ರಜತ್ ಪಾಟಿದಾರ್ ಶತಕ

Update: 2025-10-16 21:22 IST

ರಜತ್ ಪಾಟಿದಾರ್ | Photo Credit: PTI

ಇಂದೋರ್, ಅ.16: ಮಧ್ಯಪ್ರದೇಶ ತಂಡದ ನೂತನ ನಾಯಕನಾಗಿರುವ ರಜತ್ ಪಾಟಿದಾರ್ ಪಂಜಾಬ್ ವಿರುದ್ಧ ಗುರುವಾರ ನಡೆದ 2025-26ರ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 160 ಎಸೆತಗಳಲ್ಲಿ 100 ರನ್ ಗಳಿಸಿ ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ತನ್ನ 16ನೇ ಶತಕ ದಾಖಲಿಸಿದರು.

32ರ ಹರೆಯದ ಬಲಗೈ ಬ್ಯಾಟರ್ ರಜತ್ ಪಾಟಿದಾರ್ ನೂತನ ದೇಶೀಯ ಋತುವಿಗಿಂತ ಮೊದಲು ಶುಭಂ ಶರ್ಮಾ ಬದಲಿಗೆ ಮಧ್ಯಪ್ರದೇಶ ಕ್ರಿಕೆಟ್ ತಂಡದ ನಾಯಕನಾಗಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದಾರೆ.

ಪಾಟಿದಾರ್ ಈ ವರ್ಷಾರಂಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ನೇತೃತ್ವವಹಿಸಿದ್ದರು. ಕೇಂದ್ರ ವಲಯವು ದಶಕದ ನಂತರ ದುಲೀಪ್ ಟ್ರೋಫಿ ಗೆಲ್ಲುವಲ್ಲಿಯೂ ನೆರವಾಗಿದ್ದರು.

ಕಳೆದ ಬಾರಿಯ ರಣಜಿ ಟೂರ್ನಿಯಲ್ಲಿ 48.09ರ ಸರಾಸರಿಯಲ್ಲಿ 1 ಶತಕ ಹಾಗೂ 2 ಅರ್ಧಶತಕಗಳ ಸಹಿತ 529 ರನ್ ಗಳಿಸಿ ಮಧ್ಯಪ್ರದೇಶದ ಪರ 2ನೇ ಗರಿಷ್ಠ ರನ್ ಸ್ಕೋರರ್ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News