×
Ad

ಪ್ಯಾರಿಸ್ ಒಲಿಂಪಿಕ್ಸ್ | 10 ಮೀಟರ್ ಮಹಿಳಾ ಏರ್ ರೈಫಲ್ ಫೈನಲ್ ಪಂದ್ಯದಲ್ಲಿ ರಮಿತಾ ಜಿಂದಾಲ್ ಗೆ 7 ನೇ ಸ್ಥಾನ

Update: 2024-07-29 14:58 IST

Photo credit:X/@JohnyBravo183

ಪ್ಯಾರಿಸ್: 10 ಮೀಟರ್ ಮಹಿಳಾ ಏರ್ ರೈಫಲ್ ಸ್ಪರ್ಧೆಯ ರೋಚಕ ಫೈನಲ್ ನಲ್ಲಿ ಏಳನೆಯವರಾಗುವ ಮೂಲಕ ಭಾರತೀಯ ಶೂಟರ್ ರಮಿತಾ ಜಿಂದಾಲ್ ಪದಕ ಬೇಟೆಯಿಂದ ಹೊರ ಬಿದ್ದಿದ್ದಾರೆ.

ಈ ನಡುವೆ, 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದ ಮನು ಭಾಕರ್, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ತೋರಿದ್ದು, ಸರ್ಬಜೋತ್ ಸಿಂಗ್ ಜೊತೆಗೂಡಿ ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ.

ಇಂದು (ಜುಲೈ 29) ನಡೆದ ಪಂದ್ಯದಲ್ಲಿ ಉತ್ತಮ ಲಯದಲ್ಲಿದ್ದ ಸಾಂಗ್ವಾನ್ ಹಾಗೂ ಅರ್ಜುನ್ ಸಿಂಗ್ ಚೀಮಾ ಜೋಡಿಯು 10ನೆಯವರಾಗಿ ತಮ್ಮ ಸ್ಪರ್ಧೆ ಅಂತ್ಯಗೊಳಿಸಿದರೆ, ಮನು ಭಾಕರ್ ಹಾಗೂ ಸರ್ಬಜೋತ್ ಸಿಂಗ್ ಜೋಡಿಯು ಮೂರನೆಯವರಾಗಿ ಮುಕ್ತಾಯಗೊಳಿಸುವ ಮೂಲಕ ಕಂಚಿನ ಪದಕದ ಸುತ್ತಿಗೆ ಅರ್ಹತೆ ಪಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News