×
Ad

ರಣಜಿ | ಗುಜರಾತ್, ಮುಂಬೈ ತಂಡ ಕ್ವಾರ್ಟರ್ ಫೈನಲ್‌ಗೆ

Update: 2025-02-01 20:55 IST

PC : PTI 

ಅಹ್ಮದಾಬಾದ್: ಹಿಮಾಚಲ ಪ್ರದೇಶ ತಂಡವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿದ ಗುಜರಾತ್ ತಂಡ ಕ್ವಾರ್ಟರ್ ಫೈನಲ್ ಸ್ಥಾನವನ್ನು ದೃಢಪಡಿಸಿದೆ.

‘ಬಿ’ ಗುಂಪಿನಿಂದ ಎರಡನೇ ಸ್ಥಾನಿಯಾಗಿ ನಾಕೌಟ್ ಹಂತಕ್ಕೇರಿದ ಗುಜರಾತ್ ತಂಡ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

2ನೇ ದಿನದಾಟವಾದ ಶನಿವಾರ ಹಿಮಾಚಲ ತಂಡ ತನ್ನ 2ನೇ ಇನಿಂಗ್ಸ್‌ನಲ್ಲ ಕೇವಲ 175 ರನ್ ಗಳಿಸಿ ಗುಜರಾತ್ ತಂಡದ ಗೆಲುವಿಗೆ 144 ರನ್ ಗುರಿ ನೀಡಿತು. ಗುಜರಾತ್ 1 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಗೆಲುವಿನ ದಡ ಸೇರಿತು. ಆರ್ಯ ದೇಸಾಯಿ(69)ಹಾಗೂ ಜಯಮೀತ್ ಪಟೇಲ್(51 ರನ್)ಅರ್ಧಶತಕ ಗಳಿಸಿದರು.

►ಮುಂಬೈ ಕ್ವಾರ್ಟರ್ ಫೈನಲ್‌ಗೆ: ನಿರೀಕ್ಷೆಯಂತೆಯೇ ಮೇಘಾಲಯ ತಂಡವನ್ನು ಇನಿಂಗ್ಸ್ ಹಾಗೂ 456 ರನ್ ಅಂತರದಿಂದ ಹೀನಾಯವಾಗಿ ಸೋಲಿಸಿದ 42 ಬಾರಿಯ ರಣಜಿ ಚಾಂಪಿಯನ್ ಮುಂಬೈ ತಂಡ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿತು. ಮೊದಲ ಸ್ಥಾನಿಯಾಗಿ ಅಂತಿಮ-8ರ ಘಟ್ಟ ತಲುಪಿತು. ಆಲ್‌ರೌಂಡ್ ಆಟದಿಂದ(4-43,84 ರನ್, 4-48) ಗಮನ ಸೆಳೆದ ಶಾರ್ದೂಲ್ ಠಾಕೂರ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News