×
Ad

ರಣಜಿ ಟ್ರೋಫಿ: ಫೈನಲ್ ಪಂದ್ಯಕ್ಕೆ ಮುಂಬೈ ಆತಿಥ್ಯ

Update: 2024-03-04 20:50 IST

Photo: X \ @ImTanujSingh

ಮುಂಬೈ: 2023-24ರ ರಣಜಿ ಟ್ರೋಫಿ ಫೈನಲ್ ಪಂದ್ಯಕ್ಕೆ ಮುಂಬೈ ಆತಿಥ್ಯವಹಿಸಲಿದೆ. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್  ನಲ್ಲಿ ಸೋಮವಾರ ಕೊನೆಗೊಂಡ ಸೆಮಿಫೈನಲ್ ನಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡ ತಮಿಳುನಾಡು ತಂಡವನ್ನು ಇನಿಂಗ್ಸ್ ಹಾಗೂ 70 ರನ್ ಅಂತರದಿಂದ ಮಣಿಸಿತ್ತು.

ಮಾರ್ಚ್ 10ರಂದು ಪ್ರತಿಷ್ಠಿತ ವಾಂಖೆಡೆ ಸ್ಟೇಡಿಯಮ್ನಲ್ಲಿ ಆರಂಭವಾಗಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಂಬೈ ತಂಡವು ವಿದರ್ಭ ಅಥವಾ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.

ಮುಂಬೈ ತಂಡ ಎಲಿಟ್ ವಿಭಾಗದ ಗ್ರೂಪ್ ಹಂತದಲ್ಲಿ 7 ಪಂದ್ಯಗಳಲ್ಲಿ ಗರಿಷ್ಠ 37 ಪಾಯಿಂಟ್ಸ್ ಕಲೆ ಹಾಕಿತ್ತು.

ಮುಂಬೈ ತಂಡ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಡೆದಿದ್ದ ಕ್ವಾರ್ಟರ್ ಫೈನಲ್ ನಲ್ಲಿ ಬರೋಡಾ ತಂಡವನ್ನು ಎದುರಿಸಿತ್ತು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News