2026ರ ಟಿ-20 ವಿಶ್ವಕಪ್ ಗೆ ಅಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್ ನಾಯಕ
ರಶೀದ್ ಖಾನ್ | Photo Credit : PTI
ಕಾಬೂಲ್, ಡಿ.31: ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ 15 ಸದಸ್ಯರನ್ನು ಒಳಗೊಂಡ ತಂಡವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಬುಧವಾರ ಪ್ರಕಟಿಸಿದೆ. ತಂಡಕ್ಕೆ ರಶೀದ್ ಖಾನ್ ನಾಯಕತ್ವ ವಹಿಸಲಿದ್ದಾರೆ.
ಇದೇ ತಂಡವು ವಿಶ್ವಕಪ್ ಟೂರ್ನಿಗೆ ಮುನ್ನ ಯುಎಇನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಆಡಲಿದೆ. ಗುಲ್ಬದ್ದೀನ್ ನೈಬ್ ಹಾಗೂ ನವೀನ್ ಉಲ್ ಹಕ್ ಗಾಯದಿಂದ ಚೇತರಿಸಿಕೊಂಡು ವಾಪಸಾಗಿದ್ದಾರೆ. ಹಿರಿಯ ಆಟಗಾರ ಫಝಲ್ ಹಕ್ ಫಾರೂಕಿ ತಂಡದಲ್ಲಿದ್ದಾರೆ.
ಅಫ್ಘಾನಿಸ್ತಾನ ತಂಡವು ‘ಡಿ’ ಗುಂಪಿನಲ್ಲಿ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಯುಎಇ ಹಾಗೂ ಕೆನಡಾ ತಂಡಗಳೊಂದಿಗೆ ಸ್ಥಾನ ಪಡೆದಿದೆ.
ಅಫ್ಘಾನಿಸ್ತಾನ ತಂಡ:
ರಶೀದ್ ಖಾನ್ (ನಾಯಕ), ಇಬ್ರಾಹೀಂ ಝದ್ರಾನ್ (ಉಪನಾಯಕ), ರಹಮಾನುಲ್ಲಾ ಗುರ್ಬಾಝ್, ಮುಹಮ್ಮದ್ ಇಶಾಕ್, ಸೆದಿಕುಲ್ಲಾ ಅಟಲ್, ದಾರ್ವಿಶ್ ರಸೂಲಿ, ಶಾಹೀದುಲ್ಲಾ ಕಮಲ್, ಅಝ್ಮತುಲ್ಲಾ ಉಮರ್‌ಝೈ, ಗುಲ್ಬದ್ದೀನ್ ನೈಬ್, ಮುಹಮ್ಮದ್ ನಬಿ, ನೂರ್ ಅಹ್ಮದ್, ಮುಜೀಬುರ್ರಹ್ಮಾನ್, ನವೀನ್ ಉಲ್ ಹಕ್, ಫಝಲ್ ಹಕ್ ಫಾರೂಕಿ, ಅಬ್ದುಲ್ಲಾ ಅಹ್ಮದ್‌ಝೈ.