×
Ad

ಭಾರತ ವಿರುದ್ಧ ಟಿ-20 ಸರಣಿಯಿಂದ ರಶೀದ್ ಖಾನ್ ಔಟ್

Update: 2024-01-10 22:31 IST

Photo: twitter/@ICC

ಹೊಸದಿಲ್ಲಿ: ಭಾರತ ವಿರುದ್ಧ ಗುರುವಾರ ಆರಂಭವಾಗಲಿರುವ ಟ್ವೆಂಟಿ-20 ಸರಣಿಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅನುಪಸ್ಥಿತಿಯಲ್ಲಿ ಆಡಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಶೀದ್ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ.

ಈ ಸುದ್ದಿಯು ಅಫ್ಘಾನಿಸ್ತಾನ ತಂಡಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ. ರಶೀದ್ ಉಪಸ್ಥಿತಿ ಹಾಗೂ ಕೌಶಲ್ಯವು ಈ ಹಿಂದೆ ತಂಡದ ಯಶಸ್ಸಿನ ಕಾರಣವಾಗಿದೆ. ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ಅಫ್ಘಾನಿಸ್ತಾನದ ನಾಯಕ ಇಬ್ರಾಹೀಂ ಝದ್ರಾನ್ ಅವರು ರಶೀದ್ ಅನುಪಸ್ಥಿತಿಯಿಂದಾಗಿ ತನಗಾದ ನಿರಾಶೆಯನ್ನು ವ್ಯಕ್ತಪಡಿಸಿದರು. ಸರಣಿಯಲ್ಲಿ ತಂಡವು ಅವರ ಸೇವೆಯಿಂದ ವಂಚಿತವಾಗಲಿದೆ ಎಂದರು. ಅವರು ಸಂಪೂರ್ಣ ಫಿಟ್ ಆಗಿದ್ದರು. ನಾವು ಸರಣಿಯಲ್ಲಿ ಅವರಿಂದ ವಂಚಿತರಾಗಿದ್ದೇವೆ. ಅವರಿಲ್ಲದೆ ನಾವು ಪರದಾಟ ನಡೆಸಬೇಕಾಗಿದೆ. ಆದರೆ ಯಾವುದೇ ರೀತಿಯ ಪರಿಸ್ಥಿತಿಗೆ ಸಜ್ಜಾಗಿರಬೇಕಾಗುತ್ತದೆ ಎಂದು ಝದ್ರಾನ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News