×
Ad

ಮಿಚೆಲ್ ಸ್ಟಾರ್ಕ್ ಓವರ್‌ನಲ್ಲಿ ಅಬ್ಬರಿಸಿದ ರಶೀದ್ ಖಾನ್

Update: 2023-11-07 22:56 IST

ರಶೀದ್ ಖಾನ್ (Photo- PTI)

ಮುಂಬೈ: ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಯಾವಾಗಲೂ ತನ್ನ ಬೌಲಿಂಗ್‌ನ ಮೂಲಕ ಬ್ಯಾಟರ್‌ಗಳನ್ನು ಕಾಡುತ್ತಾರೆ. ಆದರೆ ಇಂದು ಅವರು ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ರನ್ನು ಕಾಡಿದರು.

ಮಂಗಳವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯದ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿರುವ ರಶೀದ್ ಕೇವಲ 18 ಎಸೆತಗಳಲ್ಲಿ ಔಟಾಗದೆ 35 ರನ್(2 ಬೌಂಡರಿ, 3 ಸಿಕ್ಸರ್) ಗಳಿಸಿದರು. ಅಫ್ಘಾನ್ ತಂಡ ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್(291/5)ಗಳಿಸಲು ನೆರವಾದರು.

ಆಸೀಸ್‌ನ ಹಿರಿಯ ಬೌಲರ್ ಮಿಷೆಲ್ ಸ್ಟಾರ್ಕ್ ಎಸೆದ ಕೊನೆಯ ಓವರ್‌ನಲ್ಲಿ ರಶೀದ್ 16 ರನ್ ಗಳಿಸಿ ವಾಂಖೆಡೆಯಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಸ್ಟಾರ್ಕ್ ಎಸೆದ ಕೊನೆಯ ಓವರ್‌ನಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ರಶೀದ್ ಶತಕವೀರ ಇಬ್ರಾಹೀಂ ಝದ್ರಾನ್‌ರೊಂದಿಗೆ 6ನ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 58 ರನ್ ಸೇರಿಸಿದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News