×
Ad

ರಚಿನ್ ಶತಕ; ಪಾಕ್ ವಿರುದ್ಧ 401 ರನ್ ಗಳ ಬೃಹತ್ ಮೊತ್ತ ಪೇರಿಸಿದ ನ್ಯೂಝಿಲ್ಯಾಂಡ್

Update: 2023-11-04 14:48 IST

Photo credit: cricketworldcup.com

ಬೆಂಗಳೂರು: ಇಲ್ಲಿನ ಎಮ್ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ  ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್  ಟೂರ್ನಿ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವು  ಪಾಕಿಸ್ತಾನ ಗೆಲುವಿಗೆ 402 ರನ್ ಗಳ ಬೃಹತ್ ಗುರಿ ನೀಡಿದೆ

ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡ ನ್ಯೂಝಿಲ್ಯಾಂಡ್ ವಿರುದ್ಧ ಬೌಲಿಂಗ್ ಆಯ್ದುಕೊಂಡಿತು. ಆದರೆ ನಾಯಕನ ಯೋಜನೆ ವಿಫಲವಾಗುವಂತೆ ಬೌಲ್ ಮಾಡಿದ ಪಾಕಿಸ್ತಾನಿ ವೇಗಿಗಳು ಅಪಾರ ರನ್ ಬಿಟ್ಟುಕೊಟ್ಟರು. ಇತ್ತ ಬ್ಯಾಟಿಂಗ್ ಬಂದ ಕಿವೀಸ್ ಬ್ಯಾಟರ್ ಗಳು ರನ್ ಹೊಳೆಯನ್ನೇ ಹರಿಸಿದರು. ಆರಂಭಿಕ ಬ್ಯಾಟರ್ ಕೇವಲ 35 ರನ್ ಗೆ ವಿಕೆಟ್ ಒಪ್ಪಿಸಿದರೆ. ಶತಕವೀರ ರಚಿನ್ ರವೀಂದ್ರ ಟೂರ್ನಿಯಲ್ಲಿ ಮತ್ತೂಂದು ಶತಕ ಸಿಡಿಸಿ ಮಿಂಚಿದರು. 15 ಬೌಂಡರಿ 2 ಸಿಕ್ಸರ್ ಸಹಿತ 108 ರನ್ ಬಾರಿಸಿದ ರಚಿನ್ ಕಡೆಗೆ ಮುಹಮ್ಮದ್ ವಾಸೀಂ ಗೆ ವಿಕೆಟ್ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡು ತಂಡ ಕೂಡಿಕೊಂಡಿದ್ದ ನಾಯಕ ಕೇನ್ ವಿಲಿಯಮ್ಸ್ 95 ರನ್ ಕೊಡುಗೆ ನೀಡಿದರು. ನಂತರ ಬ್ಯಾಟಿಂಗ್ ಬಂದ ಡರೆಲ್ ಮಿಚೆಲ್ 29 , ಚಾಪ್ಮನ್ 39 , ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. 

ಪಾಕಿಸ್ತಾನ ಪರ ಮೊಹಮ್ಮದ್ ವಾಸೀಂ 3 ವಿಕೆಟ್ ಪಡೆದರೆ ಹಸನ್ ಅಲಿ, ಇಫ್ತಿಕಾರ್ ಅಹ್ಮದ್ ಹಾಗೂ ಹಾರಿಸ್ ತಲಾ ಒಂದು ವಿಕೆಟ್ ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News