×
Ad

ಟೆಸ್ಟ್ ಆಟಗಾರರ ರ‍್ಯಾಂಕಿಂಗ್ | ನಂ.1 ಆಲ್‌ ರೌಂಡರ್ ಸ್ಥಾನ ಉಳಿಸಿಕೊಂಡ ರವೀಂದ್ರ ಜಡೇಜ

Update: 2025-05-07 20:43 IST

ರವೀಂದ್ರ ಜಡೇಜ | PC : NDTV  

ಹೊಸದಿಲ್ಲಿ: ಭಾರತದ ಸ್ಟಾರ್ ಸ್ಪಿನ್ನರ್ ರವೀಂದ್ರ ಜಡೇಜ ಐಸಿಸಿ ಟೆಸ್ಟ್ ಆಟಗಾರರ ರ‍್ಯಾಂಕಿಂಗ್‌ ನ ಆಲ್‌ ರೌಂಡರ್ ವಿಭಾಗದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಬಾಂಗ್ಲಾದೇಶದ ಕ್ರಿಕೆಟಿಗ ಮೆಹದಿ ಹಸನ್ ಮಿರಾಝ್ ಅಗ್ರ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ ಎಂದು ಐಸಿಸಿಯ ಅಧಿಕೃತ ವೆಬ್‌ ಸೈಟ್ ನಲ್ಲಿ ತಿಳಿಸಿದೆ.

ಇತ್ತೀಚೆಗೆ ಝಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿಯಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದ್ದ ಮಿರಾಝ್ ಹೊಸ ಆಲ್‌ ರೌಂಡರ್ ರ‍್ಯಾಂಕಿಂಗ್‌ ನಲ್ಲಿ ಒಂದು ಸ್ಥಾನ ಮೇಲಕ್ಕೇರಿ 2ನೇ ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿರುವ ಜಡೇಜರ ರೇಟಿಂಗ್ ಪಾಯಿಂಟ್ಸ್ 100ಕ್ಕಿಂತ ಕೆಳಗಿಳಿದಿದೆ.

ಮಿರಾಝ್ 2 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 116 ರನ್ ಹಾಗೂ 15 ವಿಕೆಟ್‌ಗಳನ್ನು ಕಬಳಿಸಿ ಆಲ್‌ ರೌಂಡ್ ಪ್ರದರ್ಶನ ನೀಡಿದ್ದು, ಜೀವನಶ್ರೇಷ್ಠ ರೇಟಿಂಗ್(327ಅಂಕ)ಪಡೆದಿದ್ದಾರೆ.

ಚಟ್ಟೋಗ್ರಾಮ್‌ ನಲ್ಲಿ ಝಿಂಬಾಬ್ವೆ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಶತಕ ಗಳಿಸಿದ್ದ ಮೆಹದಿ ಹಸನ್ ಕೊನೆಯ ದಿನದಾಟದಲ್ಲಿ 5 ವಿಕೆಟ್ ಗೊಂಚಲು ಕಬಳಿಸಿ ಬಾಂಗ್ಲಾದೇಶ ತಂಡವು ಗೆಲುವು ದಾಖಲಿಸಲು ನಿರ್ಣಾಯಕ ಪಾತ್ರವಹಿಸಿದ್ದರು.

ಟೆಸ್ಟ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ ನಲ್ಲಿ ಇಂಗ್ಲೆಂಡ್‌ ನ ಜೋ ರೂಟ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಝಿಂಬಾಬ್ವೆಯ ಅನುಭವಿ ಎಡಗೈ ಬ್ಯಾಟರ್ ಸೀಯನ್ ವಿಲಿಯಮ್ಸ್(2 ಸ್ಥಾನ ಮೇಲಕ್ಕೇರಿ 19ನೇ ಸ್ಥಾನ)ಹಾಗೂ ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ಶಾದ್ಮನ್ ಇಸ್ಲಾಂ(17 ಸ್ಥಾನ ಭಡ್ತಿ, 60ನೇ ಸ್ಥಾನ)2ನೇ ಟೆಸ್ಟ್ ನಂತರ ಭಡ್ತಿ ಪಡೆದಿದ್ದಾರೆ.

ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ ನಲ್ಲಿ 2 ಸ್ಥಾನ ಭಡ್ತಿ ಪಡೆದಿರುವ ಮೆಹದಿ ಹಸನ್ 24ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಅಗ್ರ ರ‍್ಯಾಂಕಿನ ಬೌಲರ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News