×
Ad

ಕಾಮೆಂಟೆರಿ ಬಾಕ್ಸ್‌ನ ಕಿಟಕಿ ಒಡೆದದ್ದಕ್ಕೆ ಕ್ಷಮೆ ಕೇಳಿದ ರಿಂಕು ಸಿಂಗ್!

Update: 2023-12-13 22:30 IST

ರಿಂಕು ಸಿಂಗ್ | Photo: X

ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆದಿದ್ದ ಮಳೆಬಾಧಿತ 2ನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳಿಂದ ಸೋಲು ಕಂಡಿದೆ. ಆದರೆ ರಿಂಕು ಸಿಂಗ್ ಮೊದಲ ಟಿ-20 ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಅರ್ಧಶತಕದ ಹಾದಿಯಲ್ಲಿ ಎರಡು ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದರಲ್ಲಿ ಒಂದು ಸಿಕ್ಸರ್ ಕಾಮೆಂಟೆರಿ ಬಾಕ್ಸ್‌ನ ಕಿಟಕಿ ಗಾಜಿಗೆ ಅಪ್ಪಳಿಸಿದೆ.

ಪಂದ್ಯದ ನಂತರ ವೀಡಿಯೊ ಚಾಟ್‌ನಲ್ಲಿ ಮಾತನಾಡಿದ ರಿಂಕು ಇದಕ್ಕೆ ನಾನು ಕ್ಷಮೆ ಕೇಳಬಹುದಷ್ಟೇ ಎಂದು ನಗುತ್ತಾ ಹೇಳಿದರು.

ರಿಂಕು ಸಿಂಗ್ 39 ಎಸೆತಗಳಲ್ಲಿ 68 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ಇದರಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳಿವೆ.

ಬಿಸಿಸಿಐ ಡಾಟ್ ಟಿವಿಯೊಂದಿಗೆ ಸಂವಹನ ನಡೆಸುವ ತನಕ ರಿಂಕು ಸಿಂಗ್‌ಗೆ ತಾನು ಸಿಡಿಸಿದ್ದ ಸಿಕ್ಸರ್ ಕಿಟಕಿಯ ಗಾಜನ್ನು ಒಡೆದಿತ್ತು ಎಂಬ ವಿಚಾರ ಗೊತ್ತಿರಲಿಲ್ಲ.

ನಾನು ಹೊಡೆದಿದ್ದ ಸಿಕ್ಸರ್ ಕಿಟಿಕಿಯ ಗಾಜು ಒಡೆದಿರುವ ವಿಚಾರ ನನಗೆ ಗೊತ್ತಿರಲಿಲ್ಲ. ಇದಕ್ಕಾಗಿನಾನು ಕ್ಷಮೆ ಕೋರುವೆ ಎಂದು ನಗುತ್ತಾ ರಿಂಕು ಸಿಂಗ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News