ಕೌಂಟಿ ಕ್ರಿಕೆಟ್ ಆಡದಿರಲು ಋತುರಾಜ್ ಗಾಯಕ್ವಾಡ್ ನಿರ್ಧಾರ
Update: 2025-07-19 21:08 IST
ಋತುರಾಜ್ ಗಾಯಕ್ವಾಡ್ | PTI
ಲಂಡನ್: ಭಾರತದ ಮಧ್ಯಮ ಕ್ರಮಾಂಕದ ಅಟಗಾರ ಋತುರಾಜ್ ಗಾಯಕ್ವಾಡ್ ಅವರು ಕೌಂಟಿ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ.
‘ಋತುರಾಜ್ ಅವರು ವೈಯಕ್ತಿಕ ಕಾರಣಗಳಿಂದಾಗಿ ಈ ಬಾರಿ ನಮ್ಮ ತಂಡದ ಪರ ಆಡುತ್ತಿಲ್ಲ’’ ಎಂದು ಯಾರ್ಕ್‌ಶೈರ್ ಕ್ರಿಕೆಟ್ ಕ್ಲಬ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಋತುರಾಜ್ ಅವರು ಯಾರ್ಕ್‌ಶೈರ್ ಕ್ರಿಕೆಟ್ ಕ್ಲಬ್ ಪರ 5 ಪಂದ್ಯಗಳನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದರು. ಹಾಲಿ ಚಾಂಪಿಯನ್ ಸರ್ರೆ ಎದುರು ಸ್ಕಾರ್‌ಬರೊದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲಿ ಅವರು ಕಣಕ್ಕಿಳಿಯಬೇಕಿತ್ತು.
10 ತಂಡಗಳ ಕೌಂಟಿ ಮೊದಲ ಡಿವಿಜನ್ ಲೀಗ್‌ನಲ್ಲಿ ಯಾರ್ಕ್‌ಶೈರ್ ಪ್ರಸ್ತುತ ಕೊನೆಯಿಂದ 2ನೇ ಸ್ಥಾನದಲ್ಲಿದೆ.