×
Ad

ರೋಹಿತ್‌, ಗಿಲ್‌ ಶತಕ: ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ ಭಾರತ

Update: 2024-03-08 12:27 IST

Photo:X/BCCI

ಧರ್ಮಶಾಲಾ: ಒಂದು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದ್ದ ಭಾರತ ತಂಡವು, ಇಂದು ಆಟ ಮುಂದುವರಿಸಿ ನಾಯಕ ರೋಹಿತ್ ಶರ್ಮ (103) ಹಾಗೂ ಶುಭಮನ್ ಗಿಲ್ (110) ಶತಕಗಳ ನೆರವಿನಿಂದ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಭಾರತ 2 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿರುವ ರೋಹಿತ್ ಪಡೆ, ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ. ಶತಕ ದಾಖಲಿಸಿದ ನಾಯಕ ರೋಹಿತ್‌, ಬೆನ್‌ ಸ್ಟೋಕ್ಸ್‌ ಎಸೆತದಲ್ಲಿ ಔಟಾದರು.

ಇಂಗ್ಲೆಂಡ್ ಸ್ಪಿನ್ನರ್ ಗಳು ಭಾರತದ ಬ್ಯಾಟರ್ ಗಳನ್ನು ಕಟ್ಟಿ ಹಾಕಲು ಲೆಗ್ ಸೈಡ್ ಬೌಲಿಂಗ್ ಗೇ ಹೆಚ್ಚು ಒತ್ತು ನೀಡಿದರು. ಲೆಗ್ ಸೈಡ್ ನಲ್ಲಿ ಒಟ್ಟು ಆರು ಮಂದಿ ಫೀಲ್ಡರ್ ಗಳನ್ನು ನಿಯೋಜಿಸಲಾಗಿತ್ತು. ಹೀಗಿದ್ದೂ ರೋಹಿತ್ ಶರ್ಮ ಹಾಗೂ ಶುಭಮನ್ ಗಿಲ್ ಜೋಡಿಯು ಲೀಲಾಜಾಲ ಬ್ಯಾಟಿಂಗ್ ಪ್ರದರ್ಶಿಸಿ, ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News