×
Ad

ಟಿ20 ವಿಶ್ವಕಪ್‌ಗಾಗಿ ಅಜಿತ್ ಅಗರ್ಕರ್, ರಾಹುಲ್ ದ್ರಾವಿಡ್ ಭೇಟಿಯ ವರದಿ ನಿರಾಕರಿಸಿದ ರೋಹಿತ್ ಶರ್ಮಾ

Update: 2024-04-18 22:45 IST

PC : PTI

ಹೊಸದಿಲ್ಲಿ: ಮುಂಬರುವ ಟಿ-20 ವಿಶ್ವಕಪ್‌ಗೆ ಭಾರತದ ಮಾರ್ಗಸೂಚಿಯ ಕುರಿತು ಚರ್ಚಿಸಲು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ರನ್ನು ಭೇಟಿಯಾಗಿ ಚರ್ಚಿಸಿದ್ದೇನೆ ಎಂಬ ವರದಿಯನ್ನು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ನಿರಾಕರಿಸಿದ್ದಾರೆ.

ಮೈಕಲ್ ವಾನ್ ಹಾಗೂ ಆಡಮ್ ಗಿಲ್‌ಕ್ರಿಸ್ಟ್‌ಗೆ ನೀಡಿರುವ ಸಂದರ್ಶನದಲ್ಲಿ ರೋಹಿತ್ ಈ ವರದಿಯನ್ನು ನಕಲಿ ಎಂದು ಕರೆದಿದ್ದಾರೆ.

ನಾನು ಯಾರನ್ನೂ ಭೇಟಿಯಾಗಿಲ್ಲ. ಅಜಿತ್ ಅಗರ್ಕರ್ ದುಬೈನಲ್ಲಿ ಎಲ್ಲೋ ಗಾಲ್ಫ್ ಆಡುತ್ತಿದ್ದಾರೆ. ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ತಮ್ಮ ಮಕ್ಕಳು ಆಡುವುದನ್ನು ನೋಡುತ್ತಿದ್ದಾರೆ...ನಿಜ ಹೇಳಬೇಕೆಂದರೆ ನಾವು ಭೇಟಿಯಾಗಿಲ್ಲ ಎಂದು ರೋಹಿತ್ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News