×
Ad

ತಕ್ಷಣ ನಿವೃತ್ತಿಯಾಗುವ ಯೋಚನೆ ಇಲ್ಲ : ರೊನಾಲ್ಡೊ

Update: 2024-09-03 21:38 IST

 ಕ್ರಿಸ್ಟಿಯನೊ ರೊನಾಲ್ಡ್ | PC: PTI 

ಲಿಸ್ಬನ್: ಅಂತರರಾಷ್ಟ್ರೀಯ ಫುಟ್ಬಾಲ್‌ನಿಂದ ತಕ್ಷಣಕ್ಕೆ ನಿವೃತ್ತಿಗೊಳ್ಳುವ ಯೋಚನೆಯಿಲ್ಲ ಎಂದು ಪೋರ್ಚುಗಲ್ ಆಟಗಾರ ಕ್ರಿಸ್ಟಿಯನೊ ರೊನಾಲ್ಡ್ ಸೋಮವಾರ ಹೇಳಿದ್ದಾರೆ.

‘‘ಸಮಯ ಬಂದಾಗ ನಾನು ಮುಂದುವರಿಯುತ್ತೇನೆ. ಅದು ಕಷ್ಟದ ನಿರ್ಧಾರವೇನೂ ಅಲ್ಲ’’ ಎಂದು ಲಿಸ್ಬನ್‌ನಲ್ಲಿ ಗುರುವಾರ ನಡೆಯಲಿರುವ ಕ್ರೊಯೇಶಿಯ ವಿರುದ್ಧದ ನೇಶನ್ಸ್ ಲೀಗ್ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ 39 ವರ್ಷದ ರೊನಾಲ್ಡೊ ಹೇಳಿದರು.

‘‘ನಾನು ಯಾವ ಕೊಡುಗೆಯನ್ನು ನೀಡುತ್ತಿಲ್ಲ ಎಂದು ನನಗೆ ಅನಿಸಿದರೆ, ಮೊದಲಿಗನಾಗಿ ನಿರ್ಗಮಿಸುವವ ನಾನೇ’’ ಎಂದರು.

ಐದು ಬಾರಿ ಚಿನ್ನದ ಚೆಂಡು ಪ್ರಶಸ್ತಿ ವಿಜೇತರಾಗಿರುವ ರೊನಾಲ್ಡೊ ಈಗ ಎರಡು ವರ್ಷಗಳಿಂದ ಸೌದಿ ಅರೇಬಿಯದ ಅಲ್ ನಸ್ರ್ ಕ್ಲಬ್ ಪರವಾಗಿ ಆಡುತ್ತಿದ್ದಾರೆ. ಇತ್ತೀಚೆಗೆ ನಡೆದ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಅವರಿಗೆ ಒಂದು ಗೋಲು ಬಾರಿಸಲೂ ಸಾಧ್ಯವಾಗಲಿಲ್ಲ. ಆ ಪಂದ್ಯಾವಳಿಯಿಂದ ಪೋರ್ಚುಗಲ್ ಕ್ವಾರ್ಟರ್‌ಫೈನಲ್‌ನಲ್ಲಿ ನಿರ್ಗಮಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News