×
Ad

ರೊನಾಲ್ಡೊಗೆ ʼಸೌದಿ ಪ್ರೊ ಲೀಗ್ ಋತುವಿನ ಆಟಗಾರʼ ಪ್ರಶಸ್ತಿ

Update: 2025-07-16 22:14 IST

ಕ್ರಿಸ್ಟಿಯಾನೊ ರೊನಾಲ್ಡೊ | PC : X \ @Cristiano

ರಿಯಾದ್: ಸೌದಿ ಅರೇಬಿಯದ ಫುಟ್ಬಾಲ್ ಕ್ಲಬ್ ಅಲ್ ನಸ್ರ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ‘ಸೌದಿ ಪ್ರೊ ಲೀಗ್ 2025-26 ಅಭಿಮಾನಿಗಳ ಋತುವಿನ ಆಟಗಾರ’ ಪ್ರಶಸ್ತಿಯನ್ನು ಗೆದ್ದದ್ದಾರೆ. ಋತುವಿನುದ್ದಕ್ಕೂ ಅವರು ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಲೀಗ್‌ ನಲ್ಲಿ 34 ಪಂದ್ಯಗಳಲ್ಲಿ ಆಡಿರುವ 40 ವರ್ಷದ ಪೋರ್ಚುಗಲ್ ಆಟಗಾರ 15 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಈ ವಿಷಯವನ್ನು ಲೀಗ್ ಬುಧವಾರ ಸಾಮಾಜಿಕ ಮಾಧ್ಯಮ ಎಕ್ಸ್‌ ನಲ್ಲಿ ಪ್ರಕಟಿಸಿದೆ.

ಅಲ್-ನಸ್ರ್ ಪರವಾಗಿ 105 ಪಂದ್ಯಗಳಲ್ಲಿ ಆಡಿರುವ ರೊನಾಲ್ಡೊ 93 ಗೋಲುಗಳನ್ನು ಗಳಿಸಿದ್ದಾರೆ ಮತ್ತು 19 ಗೋಲುಗಳನ್ನು ಗಳಿಸುವಲ್ಲಿ ನೆರವಾಗಿದ್ದಾರೆ. ಆದರೆ, ಅವರು ಈವರೆಗೆ ಪ್ರಶಸ್ತಿ ಗೆದ್ದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News