×
Ad

ಪೋರ್ಚುಗಲ್ ಅಂಡರ್-16 ತಂಡದಲ್ಲಿ ಚೊಚ್ಚಲ ಪಂದ್ಯವನ್ನಾಡಿದ ರೊನಾಲ್ಡೊ ಪುತ್ರ ಸ್ಯಾಂಟೋಸ್

Update: 2025-10-31 21:07 IST

ಕ್ರಿಸ್ಟಿಯಾನೊ ಡಾಸ್ ಸ್ಯಾಂಟೋಸ್ | Photo Credit :NDTV 

ಅಂಟಾಲಿಯಾ(ತುರ್ಕಿಯ),ಅ.31: ಕ್ರಿಸ್ಟಿಯಾನೊ ರೊನಾಲ್ಡೊರ ಹಿರಿಯ ಪುತ್ರ ಪೋರ್ಚುಗಲ್‌ ನ ಅಂಡರ್-16 ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಗುರುವಾರ ತನ್ನ ಚೊಚ್ಚಲ ಪಂದ್ಯವನ್ನಾಡಿದರು.

15ರ ಹರೆಯದ ಕ್ರಿಸ್ಟಿಯಾನೊ ಡಾಸ್ ಸ್ಯಾಂಟೋಸ್ ಅವರು ತುರ್ಕಿಯಾದಲ್ಲಿ ನಡೆದ ಫೆಡರೇಶನ್ಸ್ ಕಪ್ ಟೂರ್ನಮೆಂಟ್‌ ನಲ್ಲಿ ಪೋರ್ಚುಗಲ್ ತಂಡ ತುರ್ಕಿಯ ವಿರುದ್ದ 2-0 ಅಂತರದಿಂದ ಗೆದ್ದ ಪಂದ್ಯದಲ್ಲಿ 90ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದರು.

ತನ್ನ ತಂದೆ ಪ್ರತಿನಿಧಿಸುತ್ತಿರುವ ಸೌದಿ ಅರೇಬಿಯದ ಅಲ್ ನಸ್ರ್ ಕ್ಲಬ್‌ನ ಯುತ್ ಅಕಾಡಮಿಗಾಗಿ ಆಡಿರುವ ಸ್ಯಾಂಟೋಸ್ ಈ ಹಿಂದೆ ಕೂಡ ಪೋರ್ಚುಗಲ್‌ ನ ಅಂಡರ್-15 ತಂಡಕ್ಕೆ ಆಯ್ಕೆಯಾಗಿದ್ದರು.

ಪೋರ್ಚುಗಲ್‌ ನ ಅಂಡರ್-16 ತಂಡವು ಪಂದ್ಯಾವಳಿಯಲ್ಲಿ ಮುಂದಿನ ಪಂದ್ಯಗಳಲ್ಲಿ ವೇಲ್ಸ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News