×
Ad

ಪೋರ್ಚುಗಲ್ ಅಂಡರ್-15 ತಂಡಕ್ಕೆ ರೊನಾಲ್ಡೊ ಪುತ್ರ ಆಯ್ಕೆ

Update: 2025-05-06 21:44 IST

  ಕ್ರಿಸ್ಟಿಯಾನೊ ಡೋಸ್ ಸಾಂಟೋಸ್‌ , ಕ್ರಿಸ್ಟಿಯಾನೊ ರೊನಾಲ್ಡೊ | PC : X  

ಲಿಸ್ಬನ್: ಪೋರ್ಚುಗಲ್ ದೇಶದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊರ ಹಿರಿಯ ಮಗ ಕ್ರಿಸ್ಟಿಯಾನೊ ಡೋಸ್ ಸಾಂಟೋಸ್‌ ರನ್ನು ಪೋರ್ಚುಗಲ್‌ನ ಅಂಡರ್-15 ತಂಡಕ್ಕೆ ಮಂಗಳವಾರ ಸೇರ್ಪಡೆಗೊಳಿಸಲಾಗಿದೆ.

14 ವರ್ಷದ ಸಾಂಟೋಸ್ ತನ್ನ ತಂದೆಯಂತೆಯೇ ಸೌದಿ ಅರೇಬಿಯದಲ್ಲಿ ಅಲ್-ನಸ್ರ್ ಕ್ಲಬ್‌ಗಾಗಿ ಆಡುತ್ತಿದ್ದಾರೆ. ಇದಕ್ಕೂ ಮೊದಲು ಅವರು ರೊನಾಲ್ಡೊ ಹಿಂದೆ ಆಡಿರುವ ಕ್ಲಬ್‌ ಗಳಾದ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಜುವೆಂಟಸ್‌ಗಳಲ್ಲೂ ಆಡಿದ್ದಾರೆ.

ಕ್ರೊಯೇಶಿಯದಲ್ಲಿ ಮೇ 13ರಿಂದ 18ರವರೆಗೆ ನಡೆಯಲಿರುವ ವ್ಲಾಟ್ಕೊ ಮರ್ಕೊವಿಚ್ ಯುವ ಪಂದ್ಯಾವಳಿಯಲ್ಲಿ ಪೋರ್ಚುಗಲ್‌ನ ಅಂಡರ್-15 ತಂಡವು ಜಪಾನ್, ಗ್ರೀಸ್ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್ ತಂಡದ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಕೆದಾರ ರೊನಾಲ್ಡೊ, ಪೋರ್ಚುಗಲ್ ರಾಷ್ಟ್ರೀಯ ತಂಡದಲ್ಲಿ ಈಗಲೂ ಆಡುತ್ತಿದ್ದಾರೆ. 40 ವರ್ಷದ ರೊನಾಲ್ಡೊಗೆ ಐವರು ಮಕ್ಕಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News