×
Ad

ಸಚಿನ್‌ ತೆಂಡುಲ್ಕರ್‌ ಗೂ ತಟ್ಟಿದ ಡೀಪ್‌ ಫೇಕ್‌ ಸಂಕಷ್ಟ!

Update: 2024-01-15 16:27 IST

Screengrab(Twitter/@sachin_rt)

ಹೊಸದಿಲ್ಲಿ: ಸುಲಭ ಹಣ ಗಳಿಸುವ ಉಪಾಯ ಎಂದು ಹೇಳಿಕೊಂಡು ಗೇಮಿಂಗ್‌ ಆ್ಯಪ್ ಅನ್ನು ತಾನು ಪ್ರಚಾರ ಮಾಡುತ್ತಿರುವುದನ್ನು ತೋರಿಸುವ ವೀಡಿಯೋವೊಂದು “ನಕಲಿ” ಎಂದು ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಹೇಳಿದ್ದಾರೆ.

“ಈ ವೀಡಿಯೋಗಳು ನಕಲಿ. ತಂತ್ರಜ್ಞಾನದ ವಿಪರೀತ ದುರ್ಬಳಕೆ ನೋಡುವಾಗ ಆತಂಕವಾಗುತ್ತಿದೆ. ಇಂತಹ ವೀಡಿಯೋಗಳು, ಆ್ಯಪ್ ಗಳು ಮತ್ತು ಜಾಹೀರಾತುಗಳನ್ನು ವರದಿ ಮಾಡಬೇಕೆಂದು ಎಲ್ಲರಿಗೂ ಕೋರುತ್ತೇನೆ,” ಎಂದು ತೆಂಡುಲ್ಕರ್‌ ಟ್ವೀಟ್‌ ಮಾಡಿದ್ದಾರೆ.

ವೀಡಿಯೋದಲ್ಲಿ ತೆಂಡುಲ್ಕರ್‌ ಅವರು ಗೇಮಿಂಗ್‌ ಆ್ಯಪ್ ನ ಪ್ರಯೋಜನಗಳನ್ನು ವಿವರಿಸುತ್ತಾ, ಹಣ ಮಾಡುವುದು ಇಷ್ಟು ಸುಲಭ ಎಂದು ಗೊತ್ತಿರಲಿಲ್ಲ, ನನ್ನ ಮಗಳೂ ಈ ಪ್ಲಾಟ್‌ಫಾರ್ಮ್‌ ಬಳಸುತ್ತಾಳೆಂದು ಹೇಳುವುದು ಕೇಳಿಸುತ್ತದೆ.

ವೀಡಿಯೋದಲ್ಲಿನ ದನಿ ತೆಂಡುಲ್ಕರ್‌ ಅವರ ಧ್ವನಿಯನ್ನೂ ಹೋಲುತ್ತದೆ.

ಈ ಕುರಿತು ಪ್ರತಿಕ್ರಿಯಿಸಿದ ಸಚಿನ್‌ “ಸಾಮಾಜಿಕ ಜಾಲತಾಣಗಳು ಎಚ್ಚರಿಕೆಯಿಂದಿರಬೇಕು ಮತ್ತು ದೂರುಗಳಿಗೆ ಸ್ಪಂದಿಸಬೇಕು. ತಪ್ಪು ಮಾಹಿತಿ ಮತ್ತು ಡೀಪ್‌ಫೇಕ್‌ಗಳು ಹರಡುವುದನ್ನು ತಪ್ಪಿಸಲು ಅವುಗಳು ಕ್ಷಿಪ್ರ ಕ್ರಮಕೈಗೊಳ್ಳಬೇಕು,” ಎಂದು ತೆಂಡುಲ್ಕರ್‌ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News