×
Ad

2025ರ ಆವೃತ್ತಿಯ ಮಹಿಳೆಯರ ಹಾಕಿ ಏಶ್ಯಕಪ್ ಗೆ ಭಾರತ ತಂಡ ಪ್ರಕಟ; ಸಲಿಮಾ ನಾಯಕಿ

Update: 2025-08-21 22:32 IST

ಸಲಿಮಾ ಟೇಟೆ | PC :  X 

ಹೊಸದಿಲ್ಲಿ, ಆ.21: ಚೀನಾದ ಹಾಂಗ್‌ಝೌನಲ್ಲಿ ಸೆಪ್ಟಂಬರ್ 5ರಿಂದ 14ರ ತನಕ ನಿಗದಿಯಾಗಿರುವ 2025ರ ಆವೃತ್ತಿಯ ಮಹಿಳೆಯರ ಏಶ್ಯಕಪ್ ಟೂರ್ನಮೆಂಟ್‌ ಗೆ ಹಾಕಿ ಇಂಡಿಯಾವು ಗುರುವಾರ 20 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ.

ಮಹಿಳೆಯರ ಏಶ್ಯಕಪ್‌ ನಲ್ಲಿ ವಿಜೇತರಾದವರು ಬೆಲ್ಜಿಯಮ್ ಹಾಗೂ ನೆದರ್‌ಲ್ಯಾಂಡ್ಸ್ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಎಫ್‌ಐಎಚ್ ಮಹಿಳೆಯರ ಹಾಕಿ ವಿಶ್ವಕಪ್ ಪಂದ್ಯಾವಳಿಗೆ ನೇರ ಪ್ರವೇಶ ಪಡೆಯಲಿದ್ದಾರೆ.

ಸಲಿಮಾ ಟೇಟೆ ಭಾರತದ ಮಹಿಳಾ ಹಾಕಿ ತಂಡದ ನಾಯಕತ್ವವಹಿಸಲಿದ್ದು, ತಂಡದಲ್ಲಿ ಯುವಕರ ಹಾಗೂ ಅನುಭವಿಗಳ ಮಿಶ್ರಣವಿದೆ.

ಭಾರತ ತಂಡವು ‘ಬಿ’ಗುಂಪಿನಲ್ಲಿದ್ದು, ಜಪಾನ್, ಥಾಯ್ಲೆಂಡ್ ಹಾಗೂ ಸಿಂಗಾಪುರ ತಂಡಗಳನ್ನು ಎದುರಿಸಲಿದೆ.

ಭಾರತ ತಂಡವು ಥಾಯ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಆ ನಂತರ ಜಪಾನ್ ಹಾಗೂ ಸಿಂಗಾಪುರ ತಂಡಗಳನ್ನು ಎದುರಿಸಲಿದೆ.

*2025ರ ಆವೃತ್ತಿಯ ಮಹಿಳೆಯರ ಏಶ್ಯಕಪ್‌ಗೆ ಭಾರತದ ತಂಡ

ಗೋಲ್‌ ಕೀಪರ್‌ಗಳು: ಬನ್ಸಾರಿ ಸೋಲಂಕಿ, ಬಿಚು ದೇವಿ ಖರಿಬಮ್

ಡಿಫೆಂಡರ್‌ ಗಳು: ಮನಿಶಾ ಚೌಹಾಣ್, ಉದಿತಾ, ಜ್ಯೋತಿ, ಸುಮನ್ ದೇವಿ, ನಿಕ್ಕಿ ಪ್ರಧಾನ್, ಇಶಿಕಾ ಚೌಧರಿ

ಮಿಡ್ ಫೀಲ್ಡರ್‌ ಗಳು: ನೇಹಾ, ವೈಷ್ಣವಿ ವಿಠಲ್ ಫಾಲ್ಕೆ, ಸಲಿಮಾ ಟೇಟೆ, ಶರ್ಮಿಳಾ ದೇವಿ, ಲಾಲ್‌ರೆಂಸಿಯಾಮಿ, ಸುನೆಲಿಟಾ ಟೊಪ್ಪೊ.

ಫಾರ್ವರ್ಡ್‌ ಗಳು: ನವನೀತ್ ಕೌರ್, ಋತುಜಾ ದಾದಾಸೊ ಪಿಸಾಲ್, ಬ್ಯೂಟಿ ಡಂಗ್‌ಡಂಗ್, ಮುಮ್ತಾಝ್ ಖಾನ್, ದೀಪಿಕಾ, ಸಂಗೀತಾ ಕುಮಾರಿ.

*ಮಹಿಳೆಯರ ಏಶ್ಯಕಪ್-2025 ವೇಳಾಪಟ್ಟಿ

ಸೆಪ್ಟಂಬರ್ 5-ಭಾರತ-ಥಾಯ್ಲೆಂಡ್, ಮಧ್ಯಾಹ್ನ 12:00

ಸೆಪ್ಟಂಬರ್ 6-ಜಪಾನ್-ಭಾರತ, ಸಂಜೆ 4:30

ಸೆಪ್ಟಂಬರ್ 8-ಭಾರತ-ಸಿಂಗಾಪುರ, ಮಧ್ಯಾಹ್ನ 12:00

*ಸಮಯ: ಭಾರತೀಯ ಕಾಲಮಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News