×
Ad

ಟೆಸ್ಟ್ ಕ್ರಿಕೆಟ್‌ಗೆ ಸರ್ಫರಾಝ್ ಖಾನ್ ಪದಾರ್ಪಣೆ: ಭಾವುಕರಾದ ತಂದೆ ನೌಶಾದ್ ಖಾನ್

Update: 2024-02-15 13:09 IST
Photo:X/@mufaddal_vohra

ರಾಜ್‌ಕೋಟ್: ದೇಶಿ ಕ್ರಿಕೆಟ್‌ನಲ್ಲಿ ಕಠಿಣ ಪರಿಶ್ರಮದ ಮೂಲಕ ರನ್‌ಗಳ ಹೊಳೆಯನ್ನೇ ಹರಿಸಿದ್ದ ಮುಂಬೈ ಬ್ಯಾಟರ್ ಸರ್ಫರಾಝ್ ಖಾನ್ ಕೊನೆಗೂ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ಬೌಲಿಂಗ್ ದಂತಕತೆ ಅನಿಲ್ ಕುಂಬ್ಳೆ ಅವರು ಸರ್ಫರಾಝ್ ಖಾನ್‌ಗೆ ಟೆಸ್ಟ್ ಪಂದ್ಯದ ಕ್ಯಾಪ್ ಹಸ್ತಾಂತರಿಸಿದರು.

ಟಾಸ್‌ಗೂ ಮುನ್ನ ನಡೆದ ಕ್ಯಾಪ್ ಹಸ್ತಾಂತರ ಕಾರ್ಯಕ್ರಮದಲ್ಲಿ ತಮ್ಮ ಪುತ್ರನೂ ಭಾಗಿಯಾಗಿದ್ದನ್ನು ಕಂಡ ಅವರ ತಂದೆ ನೌಶಾದ್ ಖಾನ್ ಭಾವುಕರಾಗುದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಕೂಡಾ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು,  ಅವರಿಗೆ ದಿನೇಶ್ ಕಾರ್ತಿಕ್ ಅವರು ಟೆಸ್ಟ್ ಕ್ಯಾಪ್ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News