×
Ad

ಸರ್ಫರಾಝ್ ಖಾನ್ ತಂದೆ ನೌಶಾದ್‌ ಅವರಿಗೆ ಥಾರ್ ಎಸ್‌ಯುವಿ ಉಡುಗೊರೆ ನೀಡಿದ ಆನಂದ್ ಮಹೀಂದ್ರಾ

Update: 2024-02-17 13:40 IST

Photo:X/© BCCI, PTI

ಹೊಸ ದಿಲ್ಲಿ: ಮುಂಬೈ ಬ್ಯಾಟರ್ ಸರ್ಫರಾಝ್ ಖಾನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಉದ್ಯಮಿ ಆನಂದ್ ಮಹೀಂದ್ರಾ ತಾವು ನೀಡಿದ್ದ ಭರವಸೆಯಂತೆ ಸರ್ಫರಾಝ್ ಖಾನ್ ಅವರ ತಂದೆ ನೌಶಾದ್‌ಗೆ ಥಾರ್ ವಾಹನದ ಉಡುಗೊರೆ ಪ್ರಕಟಿಸಿದ್ದಾರೆ.

ಸರ್ಫರಾಝ್ ಖಾನ್ ಅವರ ಸ್ಫೂರ್ತಿದಾಯಕ ಕ್ರಿಕೆಟ್ ಪಯಣದಿಂದ ಪ್ರಭಾವಿತರಾಗಿದ್ದ ಆನಂದ್ ಮಹೀಂದ್ರಾ, ತಾವು ಸರ್ಫರಾಝ್ ಖಾನ್ ತಂದೆಗೆ ಥಾರ್ ವಾಹನದ ಉಡುಗೊರೆ ನೀಡುವ ಭರವಸೆ ನೀಡಿದ್ದರು. ಅದರಂತೆ ಆನಂದ್ ಮಹೀಂದ್ರಾ, "ಧೈರ್ಯ ಕಳೆದುಕೊಳ್ಳಬಾರದು, ಅಷ್ಟೆ! ಕಠಿಣ ಪರಿಶ್ರಮ. ಧೈರ್ಯ. ತಾಳ್ಮೆ. ತನ್ನ ಮಗುವನ್ನು ಉತ್ತೇಜಿಸಲು ತಂದೆಯೊಬ್ಬನ ಬಳಿ ಇದಕ್ಕಿಂತ ಹೆಚ್ಚು ಗುಣಮಟ್ಟದ ಅಗತ್ಯವಿದೆ? ಸ್ಫೂರ್ತಿದಾಯಕ ಪೋಷಕನಾಗಿ ಒಂದು ವೇಳೆ ನೌಶಾದ್ ಖಾನ್ ಏನಾದರೂ ಒಪ್ಪಿಕೊಂಡರೆ ಥಾರ್ ಅನ್ನು ಉಡುಗೊರೆ ನೀಡುವುದು ನನ್ನ ಪಾಲಿನ ಗೌರವವಾಗಿದೆ" ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡಾ ಹಂಚಿಕೊಂಡಿದೆ.

ತಮ್ಮ ಚೊಚ್ಚಲ ಪಂದ್ಯದಲ್ಲಿ ಸರ್ಫರಾಝ್ ಖಾನ್ 62 ರನ್ ಗಳಿಸಿ, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News