×
Ad

ಐಎಲ್‌ಟಿ20 | ಪ್ರಾಯೋಗಿಕ ಸಹಭಾಗಿತ್ವ ಘೋಷಿಸಿದ ಸೌದಿ ಅರೇಬಿಯಾ

Update: 2025-09-30 21:37 IST

PC | ILT20

ರಿಯಾದ್, ಸೆ. 30: ಸೌದಿ ಅರೇಬಿಯ ಮೊದಲ ಬಾರಿಗೆ ಕ್ರಿಕೆಟ್ ಮುಖ್ಯವಾಹಿನಿಗೆ ಕಾಲಿಟ್ಟಿದ್ದು, ಇಂಟರ್ನ್ಯಾಶನಲ್ ಲೀಗ್ ಟಿ20 (ಐಎಲ್‌ಟಿ20) ಜೊತೆ ಪ್ರಾಯೋಗಿಕ ಸಹಭಾಗಿತ್ವವನ್ನು ಘೋಷಿಸಿದೆ. ಈ ಸಹಭಾಗಿತ್ವದಡಿ, ಐಎಲ್‌ಟಿ 20 ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಆರು ಫ್ರಾಂಚೈಸಿ ತಂಡಗಳು ಕಡ್ಡಾಯವಾಗಿ ಸೌದಿ ಅರೇಬಿಯದ ಕನಿಷ್ಠ ಒಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು.

ಈ ಭಾಗೀದಾರಿಕೆಯಡಿ, ಡಿಪಿ ವರ್ಲ್ಡ್ ಐಎಲ್‌ಟಿ20ಯು ಮುಂಬರುವ ಋತುಗಳಲ್ಲಿ ಸೌದಿ ಅರೇಬಿಯದಲ್ಲಿ ಅಧಿಕೃತ ಟಿ20 ಲೀಗ್ (ಪುರುಷರು ಮತ್ತು ಮಹಿಳೆಯರು) ಪಂದ್ಯಾವಳಿಗಳನ್ನು ಆಯೋಜಿಸಲಿದೆ.

‘‘ಡಿಪಿ ವರ್ಲ್ಡ್ ಐಎಲ್‌ಟಿ20ಗೆ ಸೌದಿ ಅರೇಬಿಯದ ಆಟಗಾರರು ನೇರ ಪ್ರವೇಶವನ್ನು ಪಡೆಯುತ್ತಾರೆ. ಬುಧವಾರ ನಡೆಯಲಿರುವ ಡಿಪಿ ವರ್ಲ್ಡ್ ಐಎಲ್‌ಟಿ20 ಸೀಸನ್ 4 ಆಟಗಾರರ ಹರಾಜಿನಲ್ಲಿ, ಪ್ರತಿ ಫ್ರಾಂಚೈಸಿಯು ಸೌದಿ ಅರೇಬಿಯದ ಕನಿಷ್ಠ ಒಬ್ಬ ಆಟಗಾರನನ್ನು ತೆಗೆದುಕೊಳ್ಳಬೇಕು’’ ಎಂದು ಐಎಲ್ಟಿ20ಯ ಹೇಳಿಕೆಯೊಂದು ತಿಳಿಸಿದೆ.

ಮುಂಬರುವ ವರ್ಷಗಳಲ್ಲಿ, ಐಎಲ್‌ಟಿ20 ಪಂದ್ಯಗಳನ್ನು ಸೌದಿ ಅರೇಬಿಯಾದಲ್ಲಿಯೂ ಆಯೋಜಿಸಲಾಗುವುದು. ಈ ತಿಂಗಳ ಆರಂಭದಲ್ಲಿ ಸೌದಿ ಅರೇಬಿಯಾದಲ್ಲಿ ಕ್ರಿಕೆಟ್ ಉತ್ಸವವೊಂದನ್ನು ಆಯೋಜಿಸಲಾಗಿತ್ತು. ಇದು ದೇಶದಲ್ಲಿ ಕ್ರೀಡೆಗೆ ಹೊಸ ಪರಿಸರ ವ್ಯವಸ್ಥೆ ಸೃಷ್ಟಿಸುವ ಗುರಿಯನ್ನು ಹೊಂದಿತ್ತು. ಐಎಲ್‌ಟಿ20ನಲ್ಲಿ ಡ್ವೇನ್ ಬ್ರಾವೋ, ಜೊನಾಥನ್ ಟ್ರಾಟ್ ಮತ್ತು ಡೇವಿಡ್ ವಾರ್ನರ್ನಂತಹ ಪ್ರಸಿದ್ಧ ಮಾಜಿ ಆಟಗಾರರು ಭಾಗವಹಿಸಿದ್ದಾರೆ.

‘‘ಸೌದಿ ಅರೇಬಿಯನ್ ಕ್ರಿಕೆಟ್ ಫೆಡರೇಶನ್‌ನೊಂದಿಗಿನ ನಮ್ಮ ಸಹಭಾಗಿತ್ವವನ್ನು ಘೋಷಿಸಲು ನಾವು ಹೆಮ್ಮೆಪಡುತ್ತೇವೆ. ಸೌದಿ ಅರೇಬಿಯ ಗಲ್ಫ್ ಪ್ರದೇಶದ ಪ್ರಮುಖ ಭಾಗವಾಗಿದೆ ಹಾಗೂ ಕ್ರಿಕೆಟ್‌ನ ಅಭಿವೃದ್ಧಿಗೆ ಅದರ ಬದ್ಧತೆ ಸ್ಫೂರ್ತಿದಾಯಕವಾಗಿದೆ’’ ಎಂದು ಐಎಲ್‌ಟಿ20 ಅಧ್ಯಕ್ಷ ಖಾಲಿದ್ ಅಲ್ ಝರುನಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News