×
Ad

ಗುಜರಾತ್ ಟೈಟಾನ್ಸ್ ಪಾಲಾದ ಶಾರೂಖ್ ಖಾನ್

Update: 2023-12-19 23:20 IST

 ಶಾರೂಖ್ ಖಾನ್ | PHORO: NDTV 

ದುಬೈ: ತಮಿಳುನಾಡಿನ ಆಲ್ರೌಂಡರ್ ಶಾರೂಖ್ ಖಾನ್ ದುಬೈನಲ್ಲಿ ಮಂಗಳವಾರ ನಡೆದ ಐಪಿಎಲ್ 2024ರ ಹರಾಜಿನಲ್ಲಿ 7.4 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ಗೆ ಸೇರ್ಪಡೆಯಾದರು.

40 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಶಾರೂಖ್ ರನ್ನು ತಮ್ಮತ್ತ ಸೆಳೆಯಲು ಪಂಜಾಬ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಬಿಡ್ಡಿಂಗ್ ವಾರ್ನಲ್ಲಿ ತೊಡಗಿದ್ದವು. ಅಂತಿಮವಾಗಿ ಗುಜರಾತ್ ಮೇಲುಗೈ ಸಾಧಿಸಿತು.

ಶಾರೂಖ್ ರನ್ನು ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿತ್ತು. ಪಂಜಾಬ್ ಪರ 33 ಐಪಿಎಲ್ ಪಂದ್ಯಗಳನ್ನಾಡಿರುವ ಶಾರೂಖ್ 160ಕ್ಕೂ ಅಧಿಕ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 2023ರಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಈ ವರ್ಷದ ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಶಾರೂಖ್ ಖಾನ್ 9 ಪಂದ್ಯಗಳಲ್ಲಿ 17 ವಿಕೆಟ್‌ ಗಳನ್ನು ಪಡೆದು ಮಿಂಚಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News