×
Ad

8 ವರ್ಷಗಳ ಬಳಿಕ ಶತಕ ಬಾರಿಸಿದ ವೆಸ್ಟ್ ಇಂಡೀಸ್ ನ ಶಾಯ್ ಹೋಪ್

Update: 2025-10-13 21:11 IST

 ಶಾಯ್ ಹೋಪ್ | Photo Credit : X

ಹೊಸದಿಲ್ಲಿ, ಅ. 13: ಭಾರತ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯದ ಎರಡನೇ ಇನಿಂಗ್ಸ್‌ ನಲ್ಲಿ ಸೋಮವಾರ ಶತಕ ಬಾರಿಸಿದ ಶಾಯ್ ಹೋಪ್ ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ಪ್ರತಿಹೋರಾಟಕ್ಕೆ ಬಲ ತುಂಬಿದ್ದಾರೆ.

ಪಂದ್ಯದ ನಾಲ್ಕನೇ ದಿನದಂದು ಅವರು ಬಾರಿಸಿದ 103 ರನ್‌ಗಳು ತಂಡದ ಅತ್ಯಂತ ಅಗತ್ಯದ ಸಮಯದಲ್ಲಿ ಬಂದಿದೆ.

ಈ ಮೂಲಕ ಅವರು ಎಂಟು ವರ್ಷಗಳ ಶತಕದ ಬರವನ್ನು ನೀಗಿಸಿದ್ದಾರೆ. ಅವರ ಕೊನೆಯ ಶತಕ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಬಂದಿತ್ತು. ಸೋಮವಾರದ ಶತಕ ಟೆಸ್ಟ್‌ನಲ್ಲಿ ಅವರ ಮೂರನೆಯದಾಗಿದೆ. ಹಿಂದಿನ ಎರಡು ಶತಕಗಳನ್ನು ಅವರು 2017ರಲ್ಲಿ ಇಂಗ್ಲೆಂಡ್ ವಿರುದ್ಧ ಬಾರಿಸಿದ್ದಾರೆ.

ಅವರು ಎರಡು ಟೆಸ್ಟ್ ಶತಕಗಳ ನಡುವೆ ಅತಿ ಹೆಚ್ಚಿನ ಇನಿಂಗ್ಸ್‌ಗಳನ್ನು ಆಡಿರುವ ವೆಸ್ಟ್ ಇಂಡೀಸ್‌ನ ಜರ್ಮೈನ್ ಬ್ಲ್ಯಾಕ್‌ವುಡ್‌ರ ದಾಖಲೆಯನ್ನು ಮುರಿದಿದ್ದಾರೆ. ಹೋಪ್‌ರ ಎರಡು ಶತಕಗಳ ನಡುವೆ 58 ಇನಿಂಗ್ಸ್‌ಗಳಿದ್ದರೆ, ಬ್ಲ್ಯಾಕ್‌ವುಡ್ 47 ಇನಿಂಗ್ಸ್‌ಗಳ ಅಂತರವನ್ನು ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News