×
Ad

ಟೆಸ್ಟ್ ಪಂದ್ಯ ಆಡಿದ ಬಾಂಗ್ಲಾದೇಶದ ಹಿರಿಯ ಆಟಗಾರ ಎನಿಸಿಕೊಂಡ ಶಾಕಿಬ್ ಅಲ್ ಹಸನ್

Update: 2024-09-21 20:38 IST

ಶಾಕಿಬ್ ಅಲ್ ಹಸನ್ |  PC : PTI 

ಚೆನ್ನೈ : ಹಿರಿಯ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಟೆಸ್ಟ್ ಪಂದ್ಯದಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿದ ಹಿರಿಯ ವಯಸ್ಸಿನ ಆಟಗಾರ ಎನಿಸಿಕೊಳ್ಳುವ ಮೂಲಕ ಬಾಂಗ್ಲಾದೇಶದ ಕ್ರಿಕೆಟ್ ಇತಿಹಾಸದ ಪುಟದಲ್ಲಿ ತನ್ನ ಹೆಸರನ್ನು ಪಡಿಮೂಡಿಸಿದ್ದಾರೆ.

ಭಾರತ ವಿರುದ್ಧ ಮೊದಲ ಟೆಸ್ಟ್‌ನ 3ನೇ ದಿನವಾದ ಶನಿವಾರ ಶಾಕಿಬ್ ಮೈದಾನಕ್ಕೆ ಇಳಿದಾಗ ಅವರಿಗೆ 37 ವರ್ಷ, 181 ದಿನಗಳಾಗಿದ್ದವು. ಈ ಮೂಲಕ ಎಡಗೈ ಸ್ಪಿನ್ನರ್ ಮುಹಮ್ಮದ್ ರಫೀಕ್ ದಾಖಲೆಯನ್ನು ಶಾಕಿಬ್ ಮುರಿದರು. ರಫೀಕ್ 2008ರಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯ ಆಡುವಾಗ 37 ವರ್ಷ, 180 ದಿನಗಳಾಗಿದ್ದವು.

ಶಾಕಿಬ್ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಬಾಂಗ್ಲಾದೇಶದ ಪ್ರಮುಖ ಆಟಗಾರನಾಗಿದ್ದಾರೆ. ಕ್ರಿಕೆಟ್‌ನ ಓರ್ವ ಶ್ರೇಷ್ಠ ಆಲ್‌ರೌಂಡರ್ ಆಗಿದ್ದಾರೆ.

1930ರಲ್ಲಿ 52 ವರ್ಷ, 165 ದಿನಗಳಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯ ಆಡಿದ್ದ ಇಂಗ್ಲೆಂಡ್‌ನ ವಿಲ್ಫ್ರೆಡ್ ರೋಡ್ಸ್ ಅವರು ಟೆಸ್ಟ್ ಕ್ರಿಕೆಟ್‌ನ ಹಿರಿಯ ವಯಸ್ಸಿನ ಕ್ರಿಕೆಟಿಗನಾಗಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆ ದಾಖಲೆ ಈಗಲೂ ಉಳಿದುಕೊಂಡಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News